ಬೆಂಗಳೂರು: ಆರ್ಆರ್ ನಗರದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಬಹುತೇಕ ಬಂದಿದ್ದು ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಗೆಲುವು ನಿಶ್ಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.
20ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆಯನ್ನ ಕಾಯ್ದುಕೊಂಡಿದ್ದಾರೆ. ಕೇವಲ 40 ಸಾವಿರ ಮತ ಎಣಿಕೆ ಮಾತ್ರ ಉಳಿದಿರುವುದರಿಂದ ಮುನಿರತ್ನ ಗೆಲುವು ಖಚಿತವಾಗಿದೆ. ಅಲ್ಲದೆ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣ ಮೂರ್ತಿ 6952 ಮತಗಳನ್ನು ಮಾತ್ರ ಪಡೆದಿದ್ದು ಠೇವಣಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಪ್ರಸ್ತುತ ಮತ ಎಣಿಕೆ ನೋಡುವುದಾದರೆ ಬಿಜೆಪಿ ಅಭ್ಯರ್ಥಿ ಮುನಿರತ್ನ 103291 ಮತಗಳು ಬಂದ್ರೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮ 58742 ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣ ಮೂರ್ತಿ 6952 ವೋಟ್ಗಳು ಬಂದಿವೆ. ಉಳಿದಂತೆ 5 ಸುತ್ತಿನ ಮತ ಎಣಿಕೆ ಮಾತ್ರ ಬಾಕಿ ಉಳಿದಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

