ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಫಲಿತಾಂಶ ಬಿಜೆಪಿ ಪರವಾಗಿದೆ.
ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೂರನೆ ಸಲ 57,936 ಅಂತರದಿಂದ ಭರ್ಜರಿ ಜಯಕಂಡಿದ್ದರೆ, ಶಿರಾದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಪಡೆ ಮೊದಲ ಬಾರಿಗೆ ಖಾತೆ ತೆರೆದಿದೆ. ಅಂತಿಮ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಅಧಿಕೃತ ಘೋಷಣೆ ಬಾಕಿ ಉಳಿದಿದೆ.
ಶಿರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಎದುರಾಳಿ ಮಾಜಿ ಸಚಿವ ಕಾಂಗ್ರೆಸ್ ನ ಜಯಚಂದ್ರ ವಿರುದ್ಧ 12 ಸಾವಿರಕ್ಕು ಹೆಚ್ಚು ಮತಗಳ ಮುನ್ನಡೆ ಮೂಲಕ ಗೆಲುವು ಖಚಿತವಾಗಿದೆ.
ಶಿರಾದಲ್ಲಿ ದುರ್ಬಲವಾಗಿದ್ದ ಬಿಜೆಪಿಯನ್ನು ಗೆಲ್ಲಿಸಲು ಬಿಜೆಪಿ ಈ ಬಾರಿ ಪಣ ತೊಟ್ಟಿತ್ತು. ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಈ ಬಾರಿ ಶಿರಾದಲ್ಲಿ ಕೆಆರ್ ಪೇಟೆ ಉಪಚುನಾವಣೆ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪದೇ ಪದೇ ಹೇಳಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

