ದೊಡ್ಡಬಳ್ಳಾಪುರ: ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ವತಿಯಿಂದ ಟಿಪ್ಪು ಸುಲ್ತಾನ್ 271ನೇ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿಎಸ್‌ಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಬಿಎಸ್‌ಪಿ ಹಿರಿಯ ಮುಖಂಡರಾದ ಪುರುಷೋತ್ತಮ್ ಮಾತನಾಡಿ, ಹೊಸ ಆಲೋಚನೆಗಳ ಮೂಲಕ ಸಮರ್ಪಕವಾಗಿ ರಾಜ್ಯಭಾರ ಮಾಡಿದ ಟಿಪ್ಪು ಸುಲ್ತಾನ್ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕೇರಳದ ಮಲಬಾರಿನಲ್ಲಿ ಮಹಿಳೆಯರು ತಮ್ಮ ಎದೆ ಭಾಗವನ್ನು ಕಾಣುವಂತೆ ಓಡಾಡುವ ಕೆಟ್ಟ ವ್ಯವಸ್ಥೆ ಜಾರಿಯಲ್ಲಿದ್ದನ್ನು ಟಿಪ್ಪು ವಿರೋಧಿಸಿ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಟ್ಟಿದ್ದ. ಸ್ವಾತಂತ್ರ್ಯ ಹೋರಾಟಗಾರನಷ್ಟೇ ಅಲ್ಲದೇ ವೈಜ್ಞಾನಿಕ ಚಿಂತಕನೂ ಆಗಿದ್ದ. ಆದರೆ ಈ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸದೇ ಪಠ್ಯ ಪುಸ್ತಕಗಳಿಂದ ಟಿಪ್ಪು ವಿಚಾರಗಳನ್ನು ತೆಗೆದುಹಾಕಲಾಗುತ್ತಿದೆ. ಎಲ್ಲಾ ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡಿ, ಧರ್ಮದವರನ್ನು ಸಮಾನವಾಗಿ ಕಂಡ ಟಿಪ್ಪು , ಮಹಿಳೆಯರಿಗೆ ಶಿಕ್ಷಣ ನೀಡಿದ ಜ್ಯೋತಿ ಬಾ ಪುಲೆ ಅಂತಹ ಮಹನೀಯರ ಆದರ್ಶಗಳನ್ನು ಬಿಎಸ್‌ಪಿ ಅನುಸರಿಸುವ ಮೂಲಕ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತಿದೆ ಎಂದರು.
ಕನ್ನಡ ನಾಡು ನುಡಿಗೆ ದುಡಿದ ಮಹನೀಯರನ್ನು ಇಂದು ಸ್ಮರಿಸಿ, ಕನ್ನಡ ಭಾಷೆಯನ್ನು ಬಳಕೆ ಮಾಡುವ ಸಂಕಲ್ಪ ಮಾಡಬೇಕಿದೆ ಎಂದರು.
ಕಾರ್ಯಕಮದಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಬಿಎಸ್‌ಪಿ ತಾಲೂಕು ಅಧ್ಯಕ್ಷ ಆಂಜಿನಪ್ಪ , ಪ್ರಧಾನ ಕಾರ್ಯದರ್ಶಿ ದಾಳಪ್ಪ, ಖಜಾಂಚಿ ಕಮಲಮ್ಮ, ಕಾರ್ಯದರ್ಶಿ ಪುಷ್ಪ, ಮುಖಂಡರಾದ ಕೆ.ವಿ.ಮುನಿಯಪ್ಪ, ನರೇಂದ್ರ ಮೂರ್ತಿ, ಡಿ.ಕೆ.ಬಾಬಾ, ದೊಡ್ಡಯ್ಯ, ಪೂಜಪ್ಪ, ಗೋವಿಂದರಾಜು, ದೇವರಾಜು ಮತ್ತಿತರಿದ್ದರು ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

