ಬೆಂಗಳೂರು: ಪೊಲೀಸ್ ಆಗಬೇಕೆಂಬ ಆಸೆಯಿಂದ ಬಂದ ಯುವಕನಿಗೆ ಬೆನ್ನು ತಟ್ಟಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್, ಪೊಲೀಸ್ ಎಂದರೆ ಭಯವಲ್ಲ ಭರವಸೆ ಎಂದು ಅರಿವು ಮೂಡಿಸಿದ್ದಾರೆ.
14 ವರ್ಷದ ರೋಹಿತ್ ಎಂಬ ಯುವಕ ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಆಸೆ ಕಣ್ಗಳಿಂದ ಸಲಹೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಭೇಟಿ ಮಾಡಿದ್ದಾನೆ.
ಯುವಕನ ಉತ್ಸಾಹ, ಇಲಾಖೆ ಸೇರುವ ತುಡಿತ ಮತ್ತು ಅಭಿಮಾನ ಇಮ್ಮಡಿಗೊಳಿಸಲು ಅಪರಾಧ ಕೃತ್ಯ ಒಂದರ ಸ್ಥಳಕ್ಕೆ ಯುವಕನೊಂದಿಗೆ ತೆರಳಿ ಸ್ಥಳ ಪರಿಶೀಲಿಸಿ ಪೊಲೀಸರ ದೈನಂದಿನ ಕೆಲಸ, ಸವಾಲುಗಳ ಬಗ್ಗೆ ಪರಿಚಯಿಸಿದ್ದಾರೆ. ಅಲ್ಲದೆ ಪೊಲೀಸರ ಶಿಸ್ತು, ಕರ್ತವ್ಯ ನಿಷ್ಠೆ ಮತ್ತು ವಿಧೇಯತೆ ಬಗ್ಗೆ ವಿವರಿಸಿದ್ದಾರೆ.
ರವಿ ಡಿ.ಚನ್ನಣ್ಣನವರ್ ಅವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

