ದೊಡ್ಡಬಳ್ಳಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷವತಿಯಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ನಗರದ ತಾಲೂಕು ಕಚೇರಿಯಲ್ಲಿ ಮನವಿ ಪತ್ರವನ್ನು ತಾಲೂಕು ಅಧ್ಯಕ್ಷೆ ಪ್ರಮೀಳ ಮಹಾದೇವ್ ತಹಸೀಲ್ದಾರ್ ಟಿ.ಎಸ್.ಶಿವರಾಜ್ ಅವರಿಗೆ ನೀಡಿದರು.
ಈ ವೇಳೆ ಪರಿಷತ್ತಿನ ಗೌರವ ಕಾರ್ಯದರ್ಶಿ ಡಿ.ಈ.ಶಿವಕುಮಾರ್, ಗೌರವ ಕೋಶಾಧ್ಯಕ್ಷೆ ವಿ.ನಿರ್ಮಲ, ಸಹ ಕಾರ್ಯದರ್ಶಿ ಗಂಗರಾಜ ಶಿರವಾರ. ನಗರಧ್ಯಕ್ಷ ಬಿ.ಪಿ.ಹರಿಕುಮಾರ್, ಕಾರ್ಯದರ್ಶಿ ಭಾಸ್ಕರ್, ಜಲ್ಲಾ ನಿಕಟ ಪೂರವ ಗೌರವ ಕೋಶಾಧ್ಯಕ್ಷ ನಂ.ಮಹಾದೇವ್,ಸದಸ್ಯರಾದ ನಾಗಸಂದ್ರ ನಟರಾಜ್ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್, ಟ್ವಿಟರ್ ಲೈಕ್ ಮಾಡಿ, ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ