ಅರ್ಹ ವಿಕಲಚೇತನರಿಗೆ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪಿಸುವುದು ಸರ್ಕಾರದ ಆದ್ಯ ಕರ್ತವ್ಯ: ಆರ್.ಅಶೋಕ್

ಬೆಂ.ಗ್ರಾ.ಜಿಲ್ಲೆ: ವಿಕಲಚೇತನರ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು‌ ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್‌  ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಚೇತನರ ಸಬಲೀಕರಣ ಇಲಾಖೆ, ಭಾರತ ಸರ್ಕಾರ, ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ(ಆಲಿಂಕೋ), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ “ಸಾಮಾಜಿಕ ಅಧಿಕಾರಿತಾ ಶಿಬಿರ, ಕೇಂದ್ರ ಸರ್ಕಾರದ ವಿಶೇಷ ಅಡಿಪ್(ADIP)  ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆಯ(ದಿವ್ಯಂಗಜನ) ಉದ್ಘಾಟನೆ ಹಾಗೂ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳ ವಿತರಣಾ ಸಮಾರಂಭ”ವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ವಿಧವೆಯರಿಗಾಗಿ ವಾರ್ಷಿಕವಾಗಿ 7500 ಕೋಟಿ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು, ಅವರು ಗೌರವದಿಂದ ಬದುಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪಿಂಚಣಿ ಯೋಜನೆಯನ್ನು ಕೆಲವು ಮಧ್ಯವರ್ತಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪುತ್ತಿಲ್ಲವಾದ ಕಾರಣ  ಇಂತಹ ಘಟನೆಗಳು ಮರುಕಳಿಸದಂತೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ ಶೀಘ್ರವೇ ಅಂದರೆ 15 ದಿನಗಳಲ್ಲಿ ಜಾರಿಗೆ ಬರಲಿದ್ದು, ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದರು.ರಾಜ್ಯದಲ್ಲಿ 8,59,761 ಅಂಗವಿಕಲ ಪಿಂಚಣಿದಾರರಿದ್ದು, ಶೇ. 75% ರಷ್ಟು ಅಂಗವೈಕಲ್ಯ ಇರುವ 3,79,116 ವಿಕಲಚೇತನರಿಗೆ ಪ್ರತಿ‌ ತಿಂಗಳು ರೂ. 600 ಪಿಂಚಣಿ  ಮತ್ತು ಶೇ. 75% ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವ 4,86,645 ವಿಕಲಚೇತನರಿಗೆ ಪ್ರತಿ ತಿಂಗಳು ರೂ.1400 ಪಿಂಚಣಿ ಕೊಡಲಾಗುತ್ತಿದೆ. ಎಂದರಲ್ಲದೆ, ವಿಕಲಚೇತನರಿಗೆ ವಿಶೇಷ ಸಾಧನೆ ಮಾಡುವ ಶಕ್ತಿಯಿದ್ದು, ಸಾಧನೆಯತ್ತ ಗಮನ ಹರಿಸುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅವರು ಮಾತನಾಡಿ ಜನಪ್ರತಿನಿಧಿಗಳು, ಅಧಿಕಾರಿಗಳು ವಿಕಲಚೇತನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದರಲ್ಲದೆ, ಕೇಂದ್ರ ಸರ್ಕಾರ ಹಾಗೂ ಅಲಿಂಕೋ ಸಂಸ್ಥೆ ‌ಸಹಯೋಗದೊಂದಿಗೆ ರೂ.48.32ಲಕ್ಷ ಮೌಲ್ಯದ ಗಾಲಿ‌ ಕುರ್ಚಿ, ದ್ವಿ ಚಕ್ರ ವಾಹನಗಳು ಸೇರಿದಂತೆ ವಿವಿಧ ರೀತಿಯ ‌ವಿಕಲಚೇತನರ ಸಾಧನ ಸಲಕರಣೆಗಳು, ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ ‌ಎಂದರು.

ವಿ.ಆರ್. ಡಬ್ಲ್ಯೂ ಗಳಿಗೆ ಮಾಸಿಕ ಗೌರವಧನ ರೂ.3000ದಿಂದ ರೂ.6000ಕ್ಕೆ ಹಾಗೂ ಎಂ.ಆರ್.ಡಬ್ಲೂ ಮಾಸಿಕ ಗೌರವಧನ ರೂ.6000ದಿಂದ ರೂ.12000ಕ್ಕೆ ಹೆಚ್ಚು ಮಾಡಲಾಗಿದೆ.

ದಿವ್ಯಾಂಗರಿಗೆ ಬೇಕಿರುವುದು ಅನುಕಂಪವಲ್ಲ, ಸಬಲೀಕರಣಗೊಳ್ಳಲು ಅಗತ್ಯವಾದ ಅವಕಾಶಗಳು ಎಂದರಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು ಸ್ವಯಂ ‌ಉದ್ಯೋಗ‌ ರೂಪಿಸಿಕೊಳ್ಳಲು ವಿಕಲಚೇತನರಿಗೆ ಸಹಾಯಧನದಡಿ ‌ಸಾಲ‌ ಸೌಲಭ್ಯ ನೀಡಲಾಗುತ್ತಿದ್ದು, ಯೋಜನೆಗಳ ಸೌಲಭ್ಯ ಪಡೆಯುವಂತೆ ತಿಳಿಸಿದರು ಹಾಗೂ ವಿಕಲಚೇತನರು ಒಬ್ಬಂಟಿ‌ ಎಂಬ ಭಾವನೆ ಮರೆತು ಸರ್ಕಾರ ಅವರೊಂದಿಗೆ ಸದಾ ಇದೆ ಎಂದು‌ ಹೇಳಿದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನರು ಎಂಬ ಮನೋಭಾವದಿಂದ ಹೊರಬಂದು ಕೆಲಸ ಮಾಡಬೇಕು ಎಂದರಲ್ಲದೆ, ಖಾಸಗಿ‌ ಸಂಸ್ಥೆ ಮತ್ತು ಕೈಗಾರಿಕಾ ವಲಯಗಳಲ್ಲಿ ವಿಕಲಚೇತನರಿಗೆ ರಾಜ್ಯ ಸರ್ಕಾರ ಮೀಸಲಾತಿ ಕಲ್ಪಿಸುವ ಮೂಲಕ ಗೌರವಯುತ ಜೀವನ ಕಟ್ಟಿಕೊಳ್ಳಲು ನೆರವಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರುಗಳು ವಿಕಲಚೇತನರಿಗೆ ದ್ವಿ ಚಕ್ರವಾಹನ, ಗಾಲಿ ಕುರ್ಚಿ, ಶ್ರವಣ ಸಾಧನ ಯಂತ್ರ, ಕೃತಕ ಕೈ, ಕಾಲುಗಳು, ಊರುಗೋಲುಗಳು ಸೇರಿದಂತೆ ವಿಕಲಚೇತನರ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ.ಜಿ.ರಾಯರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ ಅವರು ಸೇರಿದಂತೆ ಆಲಿಂಕೋ ಸಂಸ್ಥೆ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ದಿವ್ಯಾಂಗರು ಮತ್ತಿತ್ತರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

ರಾಜಕೀಯ

KPCC ಅಧ್ಯಕ್ಷ ಸ್ಥಾನ ಬದಲಾವಣೆ .. ಊಹಾಪೋಹದ ಸುದ್ದಿ ಮಾಡಬೇಡಿ ಎಂದು ಖರ್ಗೆ ಕಿಡಿ

KPCC ಅಧ್ಯಕ್ಷ ಸ್ಥಾನ ಬದಲಾವಣೆ .. ಊಹಾಪೋಹದ ಸುದ್ದಿ ಮಾಡಬೇಡಿ ಎಂದು ಖರ್ಗೆ

ತಿರುಚಿ, ಮಾಲ್ ಮಸಾಲ್ ಹಚ್ಚುತ್ತೀರಿ..ಅದಕ್ಕೆ ಬಹಳ ಜನ ನಿಮಗೆ ನಿಜ ಹೇಳೋದಿಲ್ಲ. ನಾವ್ ಒಂದ್ ಹೇಳುದ್ರೆ ನಿಮ್ ಆಫೀಸ್ ಓದ ನಂತರ ಮತ್ತೊಂದು ಪ್ರಸಾರ ಆಗುತ್ತೆ. Mallikarjun Kharge

[ccc_my_favorite_select_button post_id="102672"]
MahaKumbhamela: ಮಹಾ ಕುಂಭಮೇಳದಲ್ಲಿ ಮಿಂದೆದ್ದ ರಾಷ್ಟ್ರಪತಿ| Video

MahaKumbhamela: ಮಹಾ ಕುಂಭಮೇಳದಲ್ಲಿ ಮಿಂದೆದ್ದ ರಾಷ್ಟ್ರಪತಿ| Video

ರಾಷ್ಟ್ರಪತಿ ದೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಬಳಿಕ ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. Maha Kumbhamela

[ccc_my_favorite_select_button post_id="102507"]

Aero India 2025: ಏರ್‌ಶೋಗೆ ಇಂದು ಚಾಲನೆ..

[ccc_my_favorite_select_button post_id="102489"]

ಹರ ಹರ ಮಹಾದೇವ!: ಕುಂಭಮೇಳದಲ್ಲಿ ಡಿಸಿಎಂ‌ ಡಿಕೆ

[ccc_my_favorite_select_button post_id="102476"]

ಗುಂಡಿನ ಚಕಮಕಿ: 31 ಮಂದಿ ನಕ್ಸಲರ ಹತ್ಯೆ..

[ccc_my_favorite_select_button post_id="102472"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ..!

ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ..!

ಸಿದ್ದೇಶ್ ಹಾಗೂ ಜಗದೀಶ್ ನಡುವೆ ಕುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಇದು ಅತಿರೇಕ ಮಾಡಿಕೊಂಡು ಜಗದೀಶ್ ಮೇಲೆ ಕಲ್ಲು ಎತ್ತಿ ಹಾಕಿ ಸಿದ್ದೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. Murder

[ccc_my_favorite_select_button post_id="102670"]
ಚಾಲಕನಿಗೆ ಮೂರ್ಛೆ. ಮರಕ್ಕೆ KSRTC ಬಸ್‌ ಡಿಕ್ಕಿ..!

ಚಾಲಕನಿಗೆ ಮೂರ್ಛೆ. ಮರಕ್ಕೆ KSRTC ಬಸ್‌ ಡಿಕ್ಕಿ..!

ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೇ ಹೋಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಪಲ್ಟಿಯಾಗಿ ಅಪಾರ ಸಾವು-ನೋವು ಆಗುತ್ತಿತ್ತು KSRTC

[ccc_my_favorite_select_button post_id="102495"]

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು

[ccc_my_favorite_select_button post_id="102325"]

Doddaballapura: ಬಸ್ ಅಪಘಾತ News update.. ಚಿಕಿತ್ಸೆ

[ccc_my_favorite_select_button post_id="102061"]

Doddaballapura: ಮತ್ತದೇ ಜಾಗದಲ್ಲಿ KSRTC ಬಸ್ ಅಪಘಾತ..!

[ccc_my_favorite_select_button post_id="102046"]

ಆರೋಗ್ಯ

ಸಿನಿಮಾ

ಸೆಲೆಬ್ರಿಟಿಗಳಿಗೆ ಕ್ಷಮೆ ಕೋರಿದ ದರ್ಶನ್.. ಕಾರಣವೇನು..? video ನೋಡಿ

ಸೆಲೆಬ್ರಿಟಿಗಳಿಗೆ ಕ್ಷಮೆ ಕೋರಿದ ದರ್ಶನ್.. ಕಾರಣವೇನು..? video ನೋಡಿ

ಜನ್ಮದಿನದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸೆಲೆಬ್ರಿಟಿಗಳಿಗೆ ದರ್ಶನ್ ಸಂದೇಶ ನೀಡಿದ್ದಾರೆ. ಇದೇ ವೇಳೆ ಹಲವ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. Darshan

[ccc_my_favorite_select_button post_id="102428"]
error: Content is protected !!