ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಅಗ್ರ ತಂಡಗಳ ನಡುವಿನ ಕದನಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಇದುವರೆಗೆ ಪಂದ್ಯಗಳನ್ನಾಡಿರುವ ಆರ್ ಸಿಬಿ ನಾಲ್ಕೂ ಪಂದ್ಯವನ್ನೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಸಿಎಸ್‌ಕೆ ತಮ್ಮ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಗಳಿಸಿ 2ನೇ ಸ್ಥಾನದಲ್ಲಿದೆ.
ಬೆಂಗಳೂರು ಮತ್ತು ಚೆನ್ನೈ ತಂಡಗಳು ಎಲ್ಲ ವಿಭಾಗದಲ್ಲೂ ಸಮತೋಲನದಿಂದ ಕೂಡಿದ್ದು, ಒಂದೂ ಸೋಲು ಕಾಣದ ಆರ್ ಸಿಬಿಯಲ್ಲಿ ಆತ್ಮವಿಶ್ವಾಸದಿಂದ ಕೂಡಿದೆ.
ತಮ್ಮ ಕೊನೆಯ ಪಂದ್ಯದಲ್ಲಿ ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರನ್ನೊಳಗೊಂಡ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಕೆಳ ಕ್ರಮಾಂಕದ ಆರ್ಭಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಗಳು ಹೈರಾಣಾಗಿದ್ದರು. ಬೌಲಿಂಗ್ ವಿಭಾಗ ಚೆನ್ನೈ ತಂಡಕ್ಕೆ ಕೊಂಚ ತಲೆನೋವು ತಂದಿದ್ದರೂ ಬ್ಯಾಟಿಂಗ್ ವಿಭಾಗ ಉತ್ತಮವಾಗಿದೆ.
ಪ್ರಸ್ತುತ ನಡೆದಿರುವ ಪಂದ್ಯಗಳಲ್ಲಿ ಆರ್‌ಸಿಬಿ ಬ್ಯಾಟಿಂಗ್ ಉತ್ತಮವಾಗಿದ್ದು, ಆರ್ ಸಿಬಿ ಬ್ಯಾಟಿಂಗ್ ಅನ್ನು ನಿಯಂತ್ರಿಸುವ ಸವಾಲು ಸಿಎಸ್‌ಕೆ ಮುಂದಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಆರಂಭಿಕರಾದ ದೇವದತ್ ಪಡಿಕ್ಕಲ್ ಮತ್ತು ನಾಯಕ ಕೊಹ್ಲಿ ಅಜೇಯ ಆಟವಾಡಿ 181 ರನ್‌ಗಳ ಜೊತೆಯಾಟದೊಂದಿಗೆ ಆರ್ ಸಿಬಿಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯತಂದಿದ್ದರು.
ಇದಕ್ಕೂ ಮುನ್ನ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿವಿಲಿಯರ್ಸ್ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್ ಸಿಬಿ ಹುಮ್ಮಸ್ಸಿನೊಂದಿಗೆ ಹೋರಾಡಲಿದೆ. ಪೊಟೋ ಕೃಪೆ: RCB/CSK ಪೇಜ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….