ದೊಡ್ಡಬಳ್ಳಾಪುರ: ಆರ್ಟ್ ಆಫ್ ಲಿವಿಂಗ್ ಕೇಂದ್ರ, ಶ್ರೀ ಶಾರದಾ ಶಂಕರ ಪರಿಶಿಕ್ಷಣ ಕೇಂದ್ರ ಹಾಗೂ ಸ್ವಯಂಸೇವಕರ ಸಹಯೋಗದಲ್ಲಿ, ಕರೊನಾ ತಡೆಗಟ್ಟಲು ಆನ್ಲೈನ್ ಮೂಲಕ ಉಚಿತ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ಆಯೋಜಿಸಲಾಗಿದೆ.
ಕರೊನಾ ಸೋಂಕು ತಡೆಗಟ್ಟಲು ಸಹಕಾರಿಯಾಗುವ ಶ್ವಾಸಕೋಶದ ಶ್ರಮತೆಯನ್ನು ಹೆಚ್ಚಿಸಲು ಮಾಡುವ ಕ್ರಿಯೆಗಳು, ಪ್ರಾಣಯಾಮ ಹಾಗೂ ರೋಗಮುಕ್ತ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ,ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಉದ್ದೇಶದಿಂದ ಏ.27ರಿಂದ ಮೇ.2ರ ವರೆಗೆ ಆನ್ ಲೈನ್ ಮೂಲಕ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ.
ಇದರನ್ವಯ ಬೆಳಗ್ಗೆ 8.30 ರಿಂದ 9 ವರೆಗೆ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಏಕಾಗ್ರತೆ , ಆತಂಕ ಮತ್ತು ಒತ್ತಡ ನಿವಾರಿಸಿಕೊಂಡು ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳುವ ವಿಚಾರಗಳನ್ನು ತಿಳಿಸಲಾಗುತ್ತಿದೆ.
ಸಂಜೆ 5.30 ರಿಂದ 6.15 ರವರೆಗೆ ಸಾರ್ವಜನಿಕರಿಗಾಗಿ ಶ್ವಾಸಕೋಶದ ಶ್ರಮತೆಯನ್ನು ಹೆಚ್ಚಿಸಲು ಮಾಡುವ ಕ್ರಿಯೆಗಳು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ , ಧ್ಯಾನದ ವಿಚಾರಗಳ ತರಬೇತಿ ಶಿಬಿರ ನಡೆಸಲಾಗುತ್ತಿದೆ.
ಈ ಆನ್ಲೈನ್ ಶಿಬಿರ ಸಂಪೂರ್ಣ ಉಚಿತವಾಗಿದ್ದು, ಭಾಗವಹಿಸಲು ಇಚ್ಚಿಸುವವರು ನೊಂದಣಿಗಾಗಿ ಮೂಬೈಲ್ ಸಂಖ್ಯೆ – 8951180019 / 8073788335 ಮೂಲಕ ಸಂಪರ್ಕಿಸಿ ಹೆಸರು ಮತ್ತು ನಂಬರನ್ನು ನೋಂದಾಯಿಸಿದಲ್ಲಿ, ವಾಟ್ಸಪ್ ಮೂಲಕ ಕಾರ್ಯಾಗಾರದ ಲಿಂಕ್ ಕಳಿಹಿಸಲಾಗುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಸುನಿಲ್ ವೆಂಕಟೇಶ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….