ದೊಡ್ಡಬಳ್ಳಾಪುರ: ಕೋವಿಡ್-19 ಎರಡನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ಘೋಷಿಸಿರುವ 57 ಗಂಟೆಗಳ ವಾರಾಂತ್ಯದ ಕರ್ಫ್ಯೂಗೆ ತಾಲೂಕಿನ ಜನರಿಂದ ಉತ್ತಮ ಬೆಂಬಲ ದೊರೆತಿದ್ದು, ವಾರಾಂತ್ಯದ ಕರ್ಫ್ಯೂ ಸೋಮವಾರ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಆದರೆ ವಾರಾಂತ್ಯದ ಕರ್ಫ್ಯೂ ಮುಗಿದರು, ಸರ್ಕಾರದ ಅಧಿಸೂಚನೆ ಅನ್ವಯ ಮೇ.4ರ ವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿರಲಿದೆ.
ನಗರ, ಕಸಬಾ, ದೊಡ್ಡಬೆಳವಂಗಲ, ಮಧುರೆ, ಸಾಸಲು, ತೂಬಗೆರೆ ಹೋಬಳಿಗಳಲ್ಲಿ ವಾರಾಂತ್ಯದ ಕರ್ಫ್ಯೂಗೆ ಜನತೆ ಬೆಂಬಲ ನೀಡಿದ್ದಾರೆ. ಭಾನುವಾರ ಅದ ಕಾರಣ ಇಂದು ಬೆಳಗ್ಗೆ ಮಾಂಸ ಮಾರಾಟ ಮಾಡುವ ಹಾಗೂ ಮಾರುಕಟ್ಟೆ ಬಳಿ ಜನಜಂಗುಳಿ ಕಂಡು ಬಂತು. ವಿಷಯ ತಿಳಿದ ಪೊಲೀಸರು ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು.
ತಾಲೂಕಿನಲ್ಲಿ ಅಗತ್ಯ ವಸ್ತುಗಳಕೊಳ್ಳಲು ಬೆಳಗ್ಗೆ 10ರವರೆಗೆ ಅವಕಾಶ ನೀಡಿದನ್ನೆ ಬಳಸಿಕೊಂಡು, ನಿಗದಿತ ಸಮಯ ಮುಗಿದರು ಬಾಗಿಲು ತೆರೆದಿದ್ದ ಕೆಲ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿ, ಕ್ರಮದ ಎಚ್ಚರಿಕೆ ನೀಡಿರುವ ಘಟನೆಗಳು ಕೆಲವೆಡೆ ಕಂಡು ಬಂತು.
ಉಳಿದಂತೆ ಜನನಿಬಿಡ ಪ್ರದೇಶಗಳಾದ ನಗರದ ಬಸ್ ನಿಲ್ದಾಣ, ಮಾರುಕಟ್ಟೆ, ತಾಲೂಕು ಕಚೇರಿ ವೃತ್ತ, ಬಸ್ ನಿಲ್ದಾಣ, ಬಸವ ಭವನ ವೃತ್ತ, ಟಿಬಿ ಸರ್ಕಲ್, ಡಿ ಕ್ರಾಸ್ಗಳಲ್ಲಿ ಜನರಿಲ್ಲ ಖಾಲಿ ಖಾಲಿಯಾಗಿತ್ತು. ಆಗೋಂದು, ಈಗೋಂದು ವಾಹನಗಳ ಓಡಾಟ ಬಿಟ್ಟರೆ ವಾಹನ ಸಂಚಾರ ಸ್ತಬ್ಧವಾಗಿತ್ತು.
ಜನರಿಂದ ಬೆಂಬಲ: ಸರ್ಕಾರದ ಸೂಚನೆಗೆ ಜನರಿಂದ ಉತ್ತಮ ಬೆಂಬಲ ದೊರತಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ತಿಳಿಸಿದ್ದಾರೆ.
ವಾರಾಂತ್ಯದ ಕರ್ಫ್ಯೂ ಸೋಮವಾರ ಬೆಳಗ್ಗೆ 6ಕ್ಕೆ ಮುಗಿದರು, ಸರ್ಕಾರದ ಅಧಿಸೂಚನೆ ಅನ್ವಯ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಉಳಿದ ಅಂಗಡಿಗಳು ಬಂದ್ ಇರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….