ದೊಡ್ಡಬಳ್ಳಾಪುರ: ತಾಲೂಕಿನ ಯುವ ಮುಖಂಡ, ತಿಪ್ಪೂರು ಗ್ರಾಮಪಂಚಾಯಿತಿ ನೂತನ ಹಾಗೂ ಕಿರಿಯ ಸದಸ್ಯ ನಿತಿನ್ ಗೌಡ (24) ಹೃದಯಾಘಾತದಿಂದ ಇಂದು ಸಾವನಪ್ಪಿದ್ದಾರೆ.
ಕೋವಿಡ್ ಸೋಂಕು ದೃಢಪಟ್ಟಿದ್ದ ಹಿನ್ನಲೆ, ಮುಂಜಾಗ್ರತಾ ಕ್ರಮವಾಗಿ ಶನಿವಾರವಷ್ಟೇ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇಂದು ಸಂಜೆ ತೀವ್ರ ಒತ್ತಡಕ್ಕೆ ಒಳಗಾದ ಕಾರಣ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ದೊಡ್ಡಬಳ್ಳಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೈರೇಗೌಡ ಅವರ ಪುತ್ರರಾದ ನಿತಿನ್ ಗೌಡ ಸಕ್ರಿಯ ರಾಜಕಾರಣಿಯಾಗುವ ಕನಸು ಕಂಡಿದ್ದರು.
ಕಳೆದ ಮೂರು ತಿಂಗಳ ಹಿಂದಷ್ಟೆ ನಡೆದ ತಿಪ್ಪೂರು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ, ಕಿರಿಯ ಗ್ರಾಪಂ ಸದಸ್ಯ ಎಂಬ ಹಿರಿಮೆ ಅವರದಾಗಿತ್ತು.
ಮೃತ ನಿತಿನ್ ಗೌಡ ಅಂತ್ಯಕ್ರಿಯೆ ಕುರಿತು ಹರಿತಲೇಖನಿ ಇದುವರೆವಿಗೂ ನಡೆಸಿದ ತೀವ್ರ ಪ್ರಯತ್ನದ ನಡುವೆಯೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….