ದೊಡ್ಡಬಳ್ಳಾಪುರ: ತಾಲ್ಲೂಕಿನ ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಕೋವಿಡ್ ಲಸಿಕಾ ಶಿಬಿರದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ರೈಲ್ವೆ ಇಲಾಖೆಯ ಸಿಬ್ಬಂದಿ ಹಾಗೂ ಫ್ರೆಂಟ್‌ಲೈನ್ ವರ್ಕರ್ಸ್‌ಗಳು ಸೇರಿದಂತೆ 485 ಮಂದಿಗೆ ಕೋವಿಡ್ ಲಸಿಕೆ ನೀಡಲಾಯಿತು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರೈಲ್ವೇ ಇಲಾಖೆಯ ಬೆಂಗಳೂರು ವಿಭಾಗದ ವತಿಯಿಂದ ಆಹಾರ ಧಾನ್ಯ ಸೇರಿದಂತೆ ಔಷಧಿ ಸರಬರಾಜು ಮಾಡುವ ಅನೇಕ ಸರಕು ಮತ್ತು ಪ್ರಯಾಣಿಕರ ರೈಲುಗಳ ಸಂಚಾರ ಮಾಡುತ್ತಿರುವ ಹಿನ್ನೆಲೆ, ರೈಲ್ವೇ ಇಲಾಖೆಯು ತಮ್ಮ ಮುಂಚೂಣಿ ಸಿಬ್ಬಂದಿಗಳ ಸುರಕ್ಷತೆಗಾಗಿ ಬೆಂಗಳೂರು ರೈಲ್ವೇ ವಿಭಾಗದ ಸಹಯೋಗದೊಂದಿಗೆ ನಡೆದ ಲಸಿಕಾ ಶಿಬಿರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸುತ್ತಮುತ್ತಲಿನ ರೈಲ್ವೇ ಸಿಬ್ಬಂದಿ ಸೇರಿದಂತೆ ರೈಲ್ವೇ ಲೊಕೊ ಪೈಲಟ್‌ಗಳು, ಗಾರ್ಡ್‌ಗಳು, ಆರ್‌ಪಿಎಫ್, ಸ್ಟೇಷನ್ ಮಾಸ್ಟರ್ಸ್, ವಿಭಾಗದ ಎಂಜಿನಿಯರ್‌ಗಳು, ವೈದ್ಯಕೀಯ ದಾದಿಯರು ಮತ್ತು ಪ್ಯಾರಾ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಮತ್ತು ರೈಲ್ವೇ ಇಲಾಖೆಯ ಡಾ.ಪ್ರತಿಮಾ ಅವರ ನೇತೃತ್ವದ ಜಿಲ್ಲಾ ವೈದ್ಯಕೀಯ ತಂಡ ತ್ವರಿತವಾಗಿ ಶಿಬಿರವನ್ನು ಆಯೋಜಿಸಲು ಸಹಕರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ರೈಲ್ವೇ ಇಲಾಖೆ ವತಿಯಿಂದ ಶ್ಲಾಘಿಸಿದೆ ಎಂದು ಬೆಂಗಳೂರು ರೈಲ್ವೇ ವಿಭಾಗದ ಕೋವಿಡ್ ಉಸ್ತುವಾರಿ ಅಧಿಕಾರಿ ಕುಸುಮ ಹರಿಪ್ರಸಾದ್ ಅವರು ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….