ಬೆಂ.ಗ್ರಾ.ಜಿಲ್ಲೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ದೌರ್ಜನ್ಯಕ್ಕೊಳಗಾದ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ತುರ್ತು ನೆರವು ಒದಗಿಸುವ 24×7 ಉಚಿತ ದೂರವಾಣಿ ಸೇವೆ “ಯುನಿವರ್ಸಲೈಜೇಷನ್ ಆಫ್ ವುಮೆನ್ ಹೆಲ್ಪ್ ಲೈನ್ -“181” ಅನುಷ್ಠಾನಗೊಳಿಸಲಾಗುತ್ತಿದ್ದು, ಸಂಬಂಧಿಸಿದ ಮಹಿಳೆಯರು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರಾದ ಪುಷ್ಪ ಜಿ.ರಾಯರ್ ಅವರು ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ವಿವಿಧ ರೀತಿಯ ದೌರ್ಜನ್ಯ ಸೇರಿದಂತೆ, ಕೋವಿಡ್ ಕಾರಣದಿಂದ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸುತ್ತಿರುವ ಮಹಿಳೆಯರು, ಬಾಲ್ಯವಿವಾಹಕ್ಕೊಳಗಾಗುತ್ತಿರುವ ಬಾಲಕಿಯರು ಅಥವಾ ಬಾಲ್ಯವಿವಾಹ ಕುರಿತು ಮಾಹಿತಿ ಒದಗಿಸಲು ಬಯಸುವವರು, ಕೋವಿಡ್ ಅವಧಿಯಲ್ಲಿ ಆಶ್ರಯ ಕಳೆದುಕೊಂಡು ತಾತ್ಕಾಲಿಕ ಆಶ್ರಯ ಬಯಸುವ ಹಾಗೂ ಚಿಂತೆ ಮತ್ತು ಒಂಟಿತನ ಅನುಭವಿಸುತ್ತಿರುವ ಮಹಿಳೆಯರು ಉಚಿತ ಸಹಾಯವಾಣಿ ಸಂಖ್ಯೆ 181ಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕಿ ಪುಷ್ಪ ಜಿ.ರಾಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….