ಬೆಂಗಳೂರು: ಕರೊನಾ ಎರಡನೇ ಅಲೆಯ ಹಾವಳಿಯಿಂದಾಗಿ ರಾಜ್ಯದ ಜನತೆ ತೀವ್ರವಾಗಿ ಬಸವಳಿಯುತ್ತಿದ್ದಾರೆ. ಮಹಾಮಾರಿ ಕರೊನಾದಿಂದ ಸಾವು – ನೋವು ತೀವ್ರವಾಗಿದ್ದರೆ, ಚಿತಾಗಾರಕ್ಕೆ ದಾರಿ ತೋರುವ ಫ್ಲೆಕ್ಸ್ ನಲ್ಲಿ ಬಿಜೆಪಿ ನಾಯಕರ ಚಿತ್ರ ಮುದ್ರಿಸುವ ಮೂಲಕ ಸ್ಥಳೀಯ ನಾಯಕರು ಯಡವಟ್ಟು ಮಾಡಿಕೊಂಡು ಸಾರ್ವಜನಿಕ ವಲಯಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ನೆಲಮಂಗಲ ಸಮೀಪದ ಗಿಡ್ಡೇನಹಳ್ಳಿ ಕೋವಿಡ್-19 ಸೋಂಕಿನಿಂದ ಮೃತಪಡುವವರಿಗೆ ಚಿತಾಗಾರ ಸ್ಥಾಪಿಸಲಾಗಿದೆ. ಇದಕ್ಕೆ ತೆರಳಲು ದಾರಿ ತೋರುವ ಪ್ಲೇಕ್ಸ್ ನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಸಚಿವ ಆರ್.ಅಶೋಕ್, ಬಿಡಿಎ ಅದ್ಯಕ್ಷ ಎಸ್.ಆರ್.ವಿಶ್ವನಾಥ್, ಮರಿಸ್ವಾಮಿ ಇರುವ ಪೊಟೋ ಮುದ್ರಿಸಿ ಸ್ಥಳೀಯ ರಾಜಕಾರಣಿಗಳು ಪ್ರಚಾರಕ್ಕಿಳಿದಿದ್ದಾರೆ ಎಂಬ ಆಕ್ರೋಶ ಸಾಮಾಜಿಕ ಜಾಲತಾಣದ್ದು.
ಅಲ್ಲದೆ ಜಿಲ್ಲಾಡಳಿತ ಚಿತಾಗಾರದ ವ್ಯವಸ್ಥೆ ಮಾಡಿರುವ ಕಾರ್ಯಕ್ಕೆ ಬಿಡಿಎ ಅದ್ಯಕ್ಷ ಎಸ್.ಆರ್.ವಿಶ್ವನಾಥ್ ಮಾರ್ಗದರ್ಶನದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ ನೇತೃತ್ವದಲ್ಲಿ ಚಿತಾಗಾರಕ್ಕೆ ಬರುವವರಿಗೆ ಉಚಿತ ಟೀ ಕಾಫಿ ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಮುದ್ರಿಸಿ ಪ್ರಚಾರಕ್ಕೆ ಮುಂದಾಗಿದ್ದಾರೆ.
ಈ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ನಿಮ್ಮ ಉಚಿತ ಟೀ ಕಾಫಿ ತಿಂಡಿ ಬೇಕಾಗಿಲ್ಲ. ಇದರ ಬದಲಿಗೆ ಆಸ್ಪತ್ರೆಗಳ ಮುಂದೆ ಬ್ಯಾನರ್ ಹಾಕಿ ಉಚಿತ ಬೆಡ್ ಮತ್ತು ಆಕ್ಸಿಜನ್ ನೀಡುತ್ತೇವೆ ಅಂತಾ ಹೇಳಿ.. ಅದು ನಿಜವಾದ ರಾಜಕೀಯ, ಸಮಾಜ ಸೇವೆ ಎಂದು ಕಿಡಿಕಾರಿದ್ದಾರೆ. ಇದರಿಂದ ಕೊನೆಗೂ ಎಚ್ಚೆತ್ತ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಬೆಂಬಲಿಗರು ಪೋಸ್ಟರ್ಗಳನ್ನ ತೆಗೆದು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಸ್.ಆರ್.ವಿಶ್ವನಾಥ್ ಬೆಂಬಲಿಗರು ಸಮರ್ಥನೆ ಇಳಿದಿದ್ದು, ಇದಕ್ಕು ವಿಶ್ವನಾಥ್ ಅವರಿಗೂ ಸಂಬಂಧವಿಲ್ಲ, ಯಾರೋ ಪೊಟೋ ಬಳಸಿದರೆ ವಿಶ್ವನಾಥ್ ಹೊಣೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….