ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ರೋಗಿಗಳಗೆ ರೆಮ್‌ಡೆಸಿವಿರ್ ಇಂಜೆಕ್ಷನ್ ಬಳಕೆಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ತುರ್ತು ಬಳಕೆ ಅಧಿಕಾರ(ಇಯುಎ)ಯುಎ/ ಆಫ್ ಲೇಬಲ್ ಬಳಕೆ(ಸೀಮಿತ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಮತ್ತು ನಿರ್ಧಿಷ್ಟ ಸಂದರ್ಭಗಳಲ್ಲಿ ಮಾತ್ರ) ರೆಮ್‌ಡೆಸಿವಿರ್(ಇಯುಎ)ಅನ್ನು ಮಾತ್ರ ಪರಿಗಣಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ರೆಮ್‌ಡೆಸಿವಿರ್ ಇಂಜೆಕ್ಷನ್ ಅನ್ನು ಮಧ್ಯಮದಿಂದ ತೀವ್ರವಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು (ಪೂರಕ ಆಕ್ಸಿಜನ್ ಅಗತ್ಯವಿರುವ) ಮತ್ತು ಮೂತ್ರಪಿಂಡ ಅಥವಾ ಯಕೃತ್ತಿನ ಸಾಮಾನ್ಯ ಕ್ರಿಯೆ ಇಲ್ಲದವರು (eGFR<30> 5 ಬಾರಿ ULN) ಹಾಗೂ ಹತ್ತು ದಿನದೊಳಗಿನ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ 4 ದಿನಗಳವರೆಗೆ ದಿನಕ್ಕೆ 200 ಮಿಗ್ರಾಂ IV ಎಫ್/ ಬಿ 100 ಮಿಗ್ರಾಂ ಐವಿ ಒಡಿ ಡೋಸ್ ಅನ್ನು ಶಿಫಾರಸು ಮಾಡಿದೆ. ಆಮ್ಲಜನಕದ ಬೆಂಬಲವಿಲ್ಲದ ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ರೆಮ್‌ಡೆಸಿವಿರ್ ಇಂಜೆಕ್ಷನ್‌ಅನ್ನು ಬಳಸಬಾರದು.
ರೆಮ್‌ಡೆಸಿವಿರ್ ಇಂಜೆಕ್ಷನ್‌ಅನ್ನು ಗೊತ್ತುಪಡಿಸಿರುವ ಕೋವಿಡ್-19 ಆರೋಗ್ಯ ಕೇಂದ್ರ(DCHC) ಮತ್ತು ಕೋವಿಡ್-19 ಆಸ್ಪತ್ರೆಯ ವಾರ್ಡ್‌ಗಳಲ್ಲಿ ಬಳಸಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಸಾಮಾಜಿಕ ಜಾಲತಾಣದಲ್ಲಿನ ಪೊಟೋ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….