ಬೆಂ.ಗ್ರಾ.ಜಿಲ್ಲೆ: ರಸಗೊಬ್ಬರದ ದರಗಳು ಏಪ್ರಿಲ್ ಹಿಂದಿನ ದರಕ್ಕೆ ಮರು ಪರಿಷ್ಕರಣೆಗೊಂಡಿದ್ದು, ತಯಾರಕರು ಈ ಸಂಬಂಧ ಎಲ್ಲಾ ಮಾರಾಟಗಾರರಿಗೆ ಮಾಹಿತಿ ನೀಡಿದ್ದು, ಮಾರಾಟಗಾರರು ಪರಿಷ್ಕೃತ ದರದಲ್ಲಿಯೇ ಪಾಯಿಂಟ್ ಆಫ್ ಸೇಲ್ ಉಪಕರಣದಲ್ಲಿ ರಸಗೊಬ್ಬರ ಮಾರಾಟ ಮಾಡಬೇಕೆಂದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.
ಸಸ್ಯಗಳ ಬೆಳವಣಿಗೆಗೆ ಸಮಗ್ರ ಪೋಷಕಾಂಶಗಳ ಅವಶ್ಯಕತೆಯಿದ್ದು ಕಾಳಿನ ತೂಕ ಹೆಚ್ಚಿಸಲು ಮತ್ತು ರೋಗ ನಿರೋಧಕ ಶಕ್ತಿ ಬರಲು ಪೊಟ್ಯಾಷ್ ಅಂಶ ಅತ್ಯಗತ್ಯವಾಗಿದ್ದು, ಡಿ.ಎ.ಪಿ ಯಲ್ಲಿ ಪೊಟ್ಯಾಷ್ ಅಂಶ ಇರಿವುದಿಲ್ಲ. ಬದಲಿಗೆ, ರೈತರು ಇತರೆ ಸಾರಜನಕ, ರಂಜಕ ಹಾಗೂ ಪೊಟ್ಯಾಷ್‌ಯುಕ್ತ ಸಂಕೀರ್ಣ ರಸಗೊಬ್ಬರಗಳನ್ನು ಬಿತ್ತನೆ ಸಮಯದಲ್ಲಿ ಬಳಸುವುದು.
ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್ ನೊಂದಿಗೆ ತೆರಳಿ, ಬಿಲ್ ಪಡೆದು, ರಸಗೊಬ್ಬರ ಖರೀದಿಸಬೇಕು. ಒಂದು ವೇಳೆ ಯಾವುದೇ ರಸಗೊಬ್ಬರ ಮಾರಾಟಗಾರರು ಪರಿಷ್ಕೃತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳಿಗೆ, ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕರಿಗೆ(ಮೊ.ಸಂ.:8277929928, 8277929934) ದೂರು ನೀಡುವುದು ಹಾಗೂ ಅಂತಹವರ ವಿರುದ್ಧ ರಸಗೊಬ್ಬರ ನಿಯಂತ್ರಣ ಆದೇಶ (1985)ದಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…