“ಮಕ್ಕಳಲ್ಲಿ ಕೋವಿಡ್ -19: ಭೀತಿ ಮತ್ತು ಮುನ್ನೆಚ್ಚರಿಕೆಗಳು”

ಬೆಂಗಳೂರು: ಸಿಎಸ್.ಐ.ಆರ್.ನ ಹೊಸ ಕಾಯ, ನವದೆಹಲಿಯ ಸಿ.ಎಸ್.ಐ.ಆರ್ ವಿಜ್ಞಾನ ಸಂವಹನ ಮತ್ತು ನೀತಿ ಸಂಶೋಧನೆ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎಸ್ಸಿ.ಪಿ.ಆರ್.), ಮಕ್ಕಳಲ್ಲಿ ಕೋವಿಡ್ 19 ಕುರಿತಂತೆ ಆನ್ ಲೈನ್ ಅಧಿವೇಶನ ಆಯೋಜಿಸಿತ್ತು.

ಈ ಅಧಿವೇಶನ ಇತ್ತೀಚಿನ ಎರಡನೇ ಅಲೆ ಮತ್ತು ಮಕ್ಕಳ ಮೇಲೆ ಕೋವಿಡ್ -19 ಪರಿಣಾಮ, ಭೀತಿ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯವಾದ ಸೂಕ್ತ ಶಿಷ್ಟಾಚಾರ ಕುರಿತ ವಿಚಾರಗಳ ಬಗ್ಗೆ ಗಮನ ಹರಿಸಿತು.

ಈ ವೆಬಿನಾರ್ ನಲ್ಲಿ ಮುಖ್ಯ ಅತಿಥಿಗಳಾಗಿ ನವದೆಹಲಿಯ ಕೆವಿಎಸ್ (ಎಚ್.ಕ್ಯು) ಹೆಚ್ಚುವರಿ ಆಯುಕ್ತರು (ಶಿಕ್ಷಣ) ಡಾ.ವಿ.ವಿಜಯಲಕ್ಷ್ಮೀ ಮತ್ತು ಅತಿಥಿ ಉಪನ್ಯಾಸಕರಾಗಿ ತಮಿಳುನಾಡಿನ ಚೆನ್ನೈನ ಬಾಲಾಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಆರೋಗ್ಯ ವಿಭಾಗದ ಪ್ರೊಫೆಸರ್ ಮತ್ತು ಭಾರತೀಯ ಮಕ್ಕಳ ವೈದ್ಯಶಾಸ್ತ್ರ ಅಕಾಡಮಿಯ ಕಾರ್ಯಕಾರಿ ಮಂಡಳಿಯ 2021ರ ಸದಸ್ಯರಾದ ಪ್ರೊ.ಡಾ.ಆರ್.ಸೋಮಶೇಖರ್ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಸಿ.ಎಸ್.ಐ.ಆರ್-ಎನ್.ಐ.ಎಸ್ಸಿ,ಪಿ.ಆರ್.ನ ಫೇಸ್ ಬುಕ್ ನಲ್ಲಿ ಲಭ್ಯವಿದ್ದ ಸಂಪರ್ಕದ ಮೂಲಕ ಹಲವಾರು ಗಣ್ಯರು, ಬೋಧಕ ವರ್ಗದ ಸದಸ್ಯರು, ಸಂಶೋಧಕರು ಮತ್ತು ವಿಜ್ಞಾನಿಗಳು ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಭಾಗವಹಿಸಿದ್ದರು.

ಸಿ.ಎಸ್.ಐ.ಆರ್.-ಎನ್.ಐ.ಎಸ್ಸಿ.ಪಿ.ಆರ್.ನ ನಿರ್ದೇಶಕಿ ಡಾ.ರಂಜನಾ ಅಗರ್ವಾಲ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಎರಡು ಮಹಾನ್ ಸಂಸ್ಥೆಗಳ ನಡುವಿನ ಅನೂಹ್ಯ ಒಡನಾಟವನ್ನು ಪ್ರಸ್ತಾಪಿಸಿ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ (ಸಿ.ಎಸ್.ಐ.ಆರ್.) ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನ್ (ಕೆ.ವಿ.ಎಸ್.) ಜಿಜ್ಞಾಸಾ ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ‘ವೈಜ್ಞಾನಿಕ ಮನೋಭಾವ’ ವನ್ನು ಬೆಳೆಸುವ ಮತ್ತು ಅವರನ್ನು ವಿಜ್ಞಾನ ಆಧಾರಿತವಾಗುವಂತೆ ಮಾಡುವ ಉದ್ದೇಶದಿಂದ. ವಿದ್ಯಾರ್ಥಿಗಳು – ವಿಜ್ಞಾನಿಗಳ ಸಂಪರ್ಕ ಉಪಕ್ರಮವನ್ನು 2017ರ ಮಧ್ಯಭಾಗದಿಂದ ಆರಂಭಿಸಿದೆ ಎಂದು ತಿಳಿಸಿದರು. ಇದಲ್ಲದೆ, ‘ಜಿಜ್ಞಾಸಾ’ ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಮಾತ್ರವೇ ಅಲ್ಲದೆ, ವಿಜ್ಞಾನಿಗಳಲ್ಲಿಯೂ ಉತ್ಸಾಹ ಹೆಚ್ಚಿಸುತ್ತಿದೆ. ‘ಜಿಜ್ಞಾಸಾ’ ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶವನ್ನು ಒದಗಿಸುತ್ತಿದೆ ಮತ್ತು ಆ ಮೂಲಕ ಯುವ ಮನಸ್ಸುಗಳಲ್ಲಿ ನಾವೀನ್ಯತೆಯ ಚಿಂತನೆ ಮತ್ತು ವಿಧಾನಕ್ಕೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು. ದೀರ್ಘಾವಧಿಯಲ್ಲಿ, ಇದು ಸಮಾಜಕ್ಕೆ ಪ್ರಯೋಜನಕಾರಿಯಾದ ಎಸ್ ಮತ್ತು ಟಿ ಬೆಳವಣಿಗೆಗಳ ದೃಷ್ಟಿಯಿಂದ ಪ್ರಭಾವಶಾಲಿ ಫಲಶ್ರುತಿಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದರು.

ಕೆ.ವಿ.ಎಸ್. (ಶೈಕ್ಷಣಿಕ) ಹೆಚ್ಚುವರಿ ಆಯುಕ್ತರಾದ ಡಾ.ವಿ.ವಿಜಯಲಕ್ಷ್ಮೀ, ತಮ್ಮ ಭಾಷಣದಲ್ಲಿ ಜಿಜ್ಞಾಸಾ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಿದ್ದು, ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು ವೇದಿಕೆ ಕಲ್ಪಿಸಿದೆ ಮತ್ತು ವಿಜ್ಞಾನಿಗಳ ಕಾರ್ಯವನ್ನು ಹತ್ತಿರದಿಂದ ನೋಡಲೂ ಅವಕಾಶ ನೀಡಿದೆ ಎಂದರು.

ವರ್ಷವಿಡೀ ಖಾತ್ರಿಯಾಗಿ ನಡೆವ ವಿವಿಧ ರೀತಿಯ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಉತ್ಸುಕರಾಗಿರುವುದರಿಂದ ಈ ನಂಟು ತಮ್ಮ ಸಂಸ್ಥೆಗೆ ಸಾಕಷ್ಟು ಯಶಸ್ಸು ತಂದಿದೆ ಎಂದರು. ಹಿಂದೆಂದೂ ಕಂಡು ಕೇಳರಿಯದ ಕೋವಿಡ್ -19 ಸಾಂಕ್ರಾಮಿಕವು ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೂ, ಮುಖ್ಯವಾಗಿ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಿದೆ ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರಿದೆ, ಅದು ಅವರ ಅಧ್ಯಯನದ ಮೇಲಷ್ಟೇ ಅಲ್ಲದೆ, ಅವರು ಗೆಳೆಯರೊಂದಿಗೇ ಕಳೆಯಲೂ ಆಗದಂತೆ ಮಾಡಿದೆ ಎಂದು ಡಾ. ವಿಜಯಲಕ್ಷ್ಮಿ ಹೇಳಿದರು. ಮಕ್ಕಳಿಗೆ ಶಿಕ್ಷಣದ ಒತ್ತಡವನ್ನು ನಿವಾರಿಸಲು ರಾತ್ರಿಯಿಡೀ ಶ್ರಮಿಸಿ ತಮ್ಮ ಶಿಕ್ಷಕರು ಹೇಗೆ ಐಟಿ-ನುರಿತ ತಂತ್ರಜ್ಞರಾದರು ಎಂಬುದನ್ನು ಅವರು ಸ್ಮರಿಸಿದರು.

ಚೆನ್ನೈನ ಎಸ್.ಬಿ.ಎಂ.ಸಿ.ಎಚ್. ಮಕ್ಕಳ ವೈದ್ಯ ಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಐ.ಎ.ಪಿ.ಯ ಇ.ಬಿ. ಸದಸ್ಯ ಪ್ರೊ.ಆರ್.ಸೋಮಶೇಖರ್, “ಮಕ್ಕಳಲ್ಲಿ ಕೋವಿಡ್ -19: ಭೀತಿ ಮತ್ತು ಮುನ್ನೆಚ್ಚರಿಕೆ” ಕುರಿತು ಸೂಕ್ಷ್ಮ ವಿವರಣೆಯೊಂದಿಗೆ ಪ್ರಧಾನ ಭಾಷಣ ಮಾಡಿದರು. ಕೋವಿಡ್ -19 ಮಕ್ಕಳಲ್ಲಿ ಇನ್ನೂ ಸಾಧಾರಣವಾಗಿದೆ ಎಂದು ತಿಳಿಸಿದರು.    ಮಕ್ಕಳು SARS-CoV-2 ವೈರಾಣುವಿಗೆ ಗುರಿಯಾಗಿದ್ದರೂ, ಅವರಲ್ಲಿ ಹೆಚ್ಚಿನವರು ರೋಗಲಕ್ಷಣ ರಹಿತರಾಗಿದ್ದಾರೆ ಮತ್ತು ಕೇವಲ ಶೇ. 1-2ರಷ್ಟು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದರು. ವಯಸ್ಕರಿಂದ ಸೋಂಕು ಮಕ್ಕಳಿಗೆ ಹರಡುವ ಸಾಧ್ಯತೆಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಿದ ಡಾ. ಸೋಮಶೇಖರ್, ಆ ದಿನಗಳಲ್ಲಿ ಮಕ್ಕಳಲ್ಲಿ ಜಠರ ಸಂಬಂಧಿ ಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತವೆ ಎಂದರು.  ಸಾಮಾನ್ಯ ಜ್ವರ ಮತ್ತು ನೆಗಡಿ ಮತ್ತು ಕೋವಿಡ್ -19 ರೋಗಲಕ್ಷಣಗಳನ್ನು ಹೇಗೆ ಗುರುತಿಸುವುದು ಮತ್ತು ಅವುಗಳನ್ನು ಹೇಗೆ ಪ್ರತ್ಯೇಕವಾಗಿ ನೋಡುವುದು ಎಂಬ ಬಗ್ಗೆ ವಿವರ ನೀಡಿದರು. ಭಾರತದಲ್ಲಿ ಈವರೆಗೆ ಕರ್ನಾಟಕ ರಾಜ್ಯವನ್ನು ಹೊರತು ಪಡಿಸಿ ಮಕ್ಕಳಲ್ಲಿ ಕೋವಿಡ್ -19 ಹೆಚ್ಚಾಗಿ ಬಾಧಿಸಿಲ್ಲ  ಎಂದು ಡಾ. ಸೋಮಶೇಖರ್ ತಿಳಿಸಿ, ಮಕ್ಕಳಿಗೆ ವಿವಿಧ ರೀತಿಯ ಕೋವಿಡ್ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ವಿವರಿಸಿದರು.  ಅಧಿವೇಶನವನ್ನು ಮುಂದುವರಿಸಿದ ಅವರು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಕೆಲವು ಕ್ರಮಗಳನ್ನು ಸೂಚಿಸಿದರು: ದೈಹಿಕ ವ್ಯಾಯಾಮ, ಮಕ್ಕಳೊಂದಿಗೆ ಆಟವಾಡುವುದು, ಕುರುಕಲು ತಿಂಡಿ (ಜಂಕ್ ಫುಡ್)ಯನ್ನು ತಿನ್ನದಿರುವುದು, ಉತ್ತಮ ನಿದ್ರೆ ಮಾಡುವುದು, ಮಾಸ್ಕ್ ಗಳನ್ನು ಧರಿಸುವುದು, ಸಮತೋಲಿತ ಆಹಾರ ಸೇವನೆ ಮತ್ತು ವಯಸ್ಸಿಗೆ ಸೂಕ್ತವಾದ ಲಸಿಕೆ ಪಡೆಯುವುದು. ಬಹು ಮುಖ್ಯವಾಗಿದೆ ಎಂದ ಅವರು, ರೋಗಲಕ್ಷಣಗಳು ಮತ್ತು ಮಗುವಿನ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸುವಂತೆ ಸಲಹೆ ನೀಡಿದರು.

ಸಿಎಸ್.ಐ.ಆರ್. ಎನ್.ಐ.ಎಸ್ಸಿಪಿಆರ್ ನ ಹಿರಿಯ ಮುಖ್ಯ ವಿಜ್ಞಾನಿ ಡಾ.ವೈ. ಮಾಧವಿ, ಮುಖ್ಯ ವಿಜ್ಞಾನಿ ಆರ್.ಎಸ್. ಜಯಸೋಮು, ಡಾ. ಎನ್.ಕೆ. ಪ್ರಸನ್ನ, ಸಿಬ್ಬಂದಿ ಹಾಜರಿದ್ದರು

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

ರಾಜಕೀಯ

ಸ್ಮಾರ್ಟ್ ಮೀಟರ್ ಹಗರಣ: ಜೆಡಿಎಸ್‌ ನಿಂದ ಕೆ.ಜೆ ಜಾರ್ಜ್‌ ಮನೆ ಮುತ್ತಿಗೆ ಯತ್ನ.. ಬಿ.ಮುನೇಗೌಡ ಸೇರಿ ಅನೇಕರ ಬಂಧನ

ಸ್ಮಾರ್ಟ್ ಮೀಟರ್ ಹಗರಣ: ಜೆಡಿಎಸ್‌ ನಿಂದ ಕೆ.ಜೆ ಜಾರ್ಜ್‌ ಮನೆ ಮುತ್ತಿಗೆ ಯತ್ನ..

ಬಿ.ಮುನೇಗೌಡ ಅವರು ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡಿ ದರೋಡೆಗೆ ಇಳಿದಿದೆ. ಸ್ಮಾರ್ಟ್ ಮೀಟರ್ ವಿಚಾರವಾಗಿ ಜನರ ತೆರಿಗೆ ದುಡ್ಡನ್ನು ಲೂಟಿ JDS

[ccc_my_favorite_select_button post_id="104654"]
ಶ್ರೀ ಕ್ಷೇತ್ರ ಘಾಟಿ ದೇಗುಲದಲ್ಲಿ ಹುಂಡಿ ಎಣಿಕೆ ಮುಕ್ತಾಯ; ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ..?; Video

ಶ್ರೀ ಕ್ಷೇತ್ರ ಘಾಟಿ ದೇಗುಲದಲ್ಲಿ ಹುಂಡಿ ಎಣಿಕೆ ಮುಕ್ತಾಯ; ಸಂಗ್ರಹವಾದ ಕಾಣಿಕೆ ಎಷ್ಟು

ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಗುರುವಾರ ಎಣಿಕೆ ಮಾಡಲಾಯಿತು. Doddaballapura

[ccc_my_favorite_select_button post_id="104642"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕಿಂಗ್ ಕೊಹ್ಲಿಗೆ ಗೆಳೆಯ ಎಬಿಡಿ ಕಿವಿಮಾತು

ಕಿಂಗ್ ಕೊಹ್ಲಿಗೆ ಗೆಳೆಯ ಎಬಿಡಿ ಕಿವಿಮಾತು

ಬೆಂಗಳೂರು: IPLಗೆ ಕ್ಷಣಗಣನೆ ಆಭವಾಗಿದ್ದು, ಕ್ರಿಕೆಟ್ ಜ್ವರ ವ್ಯಾಪಿಸುತ್ತಿದೆ. ಈ ನಡುವೆ ಆರ್‌ಸಿಬಿಯ ಮಾಜಿ ಆಟಗಾರ, ದಕ್ಷಿಣಆಫ್ರಿಕಾದ ಮೂಲದ ಎಬಿ.ಡಿ ವಿಲ್ಲಿಯರ್ಸ್ (ABD) ವಿರಾಟ್ ಕೊಹ್ಲಿಗೆ (Virat Kohli) ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ‘ವಿರಾಟ್

[ccc_my_favorite_select_button post_id="104303"]

ಫೆ.28 ರಂದು ಮಹಿಳಾ ಕ್ರೀಡಾಕೂಟ

[ccc_my_favorite_select_button post_id="103061"]

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]
ದೊಡ್ಡಬಳ್ಳಾಪುರದಲ್ಲಿ ರೌಡಿ ಪರೇಡ್.. ಇನ್ಸ್ಪೆಕ್ಟರ್ ಅಮರೇಶ್ ಗೌಡ ವಾರ್ನಿಂಗ್‌ಗೆ ರೌಡಿಗಳು ಗಪ್‌ಚುಪ್..!

ದೊಡ್ಡಬಳ್ಳಾಪುರದಲ್ಲಿ ರೌಡಿ ಪರೇಡ್.. ಇನ್ಸ್ಪೆಕ್ಟರ್ ಅಮರೇಶ್ ಗೌಡ ವಾರ್ನಿಂಗ್‌ಗೆ ರೌಡಿಗಳು ಗಪ್‌ಚುಪ್..!

ಸುಮಾರು 22 ಮಂದಿ ರೌಡಿಗಳನ್ನು ವಿಚಾರಿಸಿದ ಅಮರೇಶ್ ಗೌಡ, ಅಪರಾಧ ಚಟುವಟಿಕೆಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. Doddaballapura

[ccc_my_favorite_select_button post_id="104638"]
ವಾಹನಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

ವಾಹನಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

ಗೌರಿಬಿದನೂರು: ಶಾಲಾ ವಾಹನ ಮತ್ತು ದ್ವಿಚಕ್ರ, ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ (Accident) ಇಬ್ಬರು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹಿಂದೂಪುರ ಬೈಪಾಸ್ ರಸ್ತೆಯ ನರಿಂಗ್ ಕಾಲೇಜು ಮುಂಭಾಗದಲ್ಲಿ

[ccc_my_favorite_select_button post_id="104484"]

ಆರೋಗ್ಯ

ಸಿನಿಮಾ

ನಟ ದರ್ಶನ್ ಭಗವತಿ ದೇವಾಲಯಕ್ಕೆ ಭೇಟಿ.. ಕೆಲ ಖಾಸಗಿ ನ್ಯೂಸ್ ಚಾನಲ್‌ಗಳಿಗೆ ಢವಢವ

ನಟ ದರ್ಶನ್ ಭಗವತಿ ದೇವಾಲಯಕ್ಕೆ ಭೇಟಿ.. ಕೆಲ ಖಾಸಗಿ ನ್ಯೂಸ್ ಚಾನಲ್‌ಗಳಿಗೆ ಢವಢವ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಕೇರಳದ ಕಣ್ಣೂರಿನಲ್ಲಿರುವ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾದ ಕೆಲವೇ ಸೆಕೆಂಡ್ ಗಳ ವಿಡಿಯೋ ಕೆಲ

[ccc_my_favorite_select_button post_id="104465"]
error: Content is protected !!