ದೊಡ್ಡಬಳ್ಳಾಪುರ: ತಾಲೂಕಿನ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕರೊನಾ ವಾರಿಯರ್ಸ್ ಗಳಿಗೆ, ಬೆಂಗಳೂರಿನ ಆರ್.ಟಿ.ನಗರದ ರೋಟರಿ ಕ್ಲಬ್ ಸಂಸ್ಥೆಯ ಪದಾಧಿಕಾರಿಗಳು ಸುಮಾರು ರೂ 1ಲಕ್ಷ 50ಸಾವಿರ ಮೊತ್ತದ ಕೋವಿಡ್ ತಡೆ ಪರಿಕರಗಳ ನೆರವು ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕರೊನಾ ತಡೆಗೆ ಶ್ರಮಿಸುತ್ತಿರುವ ವಾರಿಯರ್ಸ್ ಗಳ ಶ್ರಮ ಅಪಾರ, ಕುಟುಂಬವ ಬದಿಗೊತ್ತಿ, ಜೀವದ ಅಂಗನ್ನು ತೊರೆದು ಶ್ರಮಿಸುತ್ತಿರುವ ಅವರುಗಳ ಸೇವೆಯನ್ನು ಸಂಘಸಂಸ್ಥೆಗಳು ಗುರುತಿಸಿರುವುದು ಪ್ರಶಂಸನೀಯ.
ಈ ನಿಟ್ಟಿನಲ್ಲಿ ಬೆಂಗಳೂರಿನ ಆರ್.ಟಿ.ನಗರದ ರೋಟರಿ ಕ್ಲಬ್ ಗ್ರಾಮೀಣ ಭಾಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್ ಗಳ ಆರೋಗ್ಯದ ಕಾಳಜಿವಹಿಸಿ ಕರೊನಾ ತಡೆ ಪರಿಕರಗಳನ್ನು ನೀಡುತ್ತಿದೆ ಎಂದರು.
ಈ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ರಾಜಶೇಖರ್, ಪದಾಧಿಕಾರಿಗಳಾದ ಮನೋಜ್, ಹರ್ಷವರ್ಧನ್, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…