ದೊಡ್ಡಬಳ್ಳಾಪುರ: ಕೋವಿಡ್ ಎರಡನೇ ಅಲೆ ತಡೆಗಟ್ಟಲು ಘೋಷಿಸಲಾಗಿರುವ ಲಾಕ್‍ಡೌನ್ ಕಾರಣ, ಸಮಸ್ಯೆ ಒಳಗಾಗಿದ್ದ ರೋಗಿಗಳ ನೆರವಿಗೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ನೀಡುತ್ತಿದ್ದ ಉಚಿತ ಸೇವೆಯನ್ನು ಕರೊನಾ ಪ್ರಕರಣಗಳು ಇಳಿಮುಖವಾಗಿರುವ ಕಾರಣ ಇಂದು ಅಂತ್ಯಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಕೋವಿಡ್ ಎರಡನೇ ಅಲೆ ಜನರನ್ನು ತೀವ್ರವಾಗಿ ಸಂಕಷ್ಟಕ್ಕೆ ದೂಡಿದ್ದ ಸಂದರ್ಭದಲ್ಲಿ, ಚಿಕಿತ್ಸೆಗೆ ಬರುವ ಕೊವಿಡ್ ಪೀಡಿತರು ಹಾಗೂ ಅವರ ಸಹಾಯಕರಿಗೆ ಅಗತ್ಯ ಉಪಹಾರದ ಕೊರತೆ ಎದುರಾಗಿತ್ತು.
ಲಾಕ್‍ಡೌನ್ ಘೋಷಣೆ ಹಿನ್ನೆಲೆ ಹೋಟೆಲ್ ಗಳು ಮುಚ್ಚಿದ್ದ ಹಿನ್ನಲೆ ಅಗತ್ಯ ಉಪಹಾರಕ್ಕೆ ರೋಗಿಗಳ ಕಡೆಯವರು ಪರದಾಡುವಂತಾಗಿತ್ತಲ್ಲದೆ, ಕೆಲವರು ಹೆಚ್ಚುವರಿ ಹಣದ ಸುಲಿಗೆಗಿಳಿದಿದ್ದರೂ. ಈ ನಿಟ್ಟಿನಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನ, ದಾನಿಗಳ ಸಹಕಾರದಿಂದ ನಮ್ಮ ಸಂಘಟನೆ ಕರೊನಾ ಸಂಕಷ್ಟದಲ್ಲಿ ಜನರಿಗೆ ಕೈಲಾದಷ್ಟು ನೆರವನ್ನು ನೀಡಲಾಗಿದೆ ಎಂದರು.
ಈ ವೇಳೆ ಡಾ.ಗಿರೀಶ್, ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು, ನಗರ ಉಪಾಧ್ಯಕ್ಷ ರಘುನಂದನ್, ತಾಲೂಕು ಕಾರ್ಯದರ್ಶಿ ಜೋಗಹಳ್ಳಿ ಅಮ್ಮು, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ರಾಜಘಟ್ಟ ಮಹೇಶ್ ಇದ್ದರು.
ಈ ಸಂಘಟನೆ ಕಳೆದ 22 ದಿನಗಳಿಂದ ನಿರಂತರವಾಗಿ ರೋಗಿಗಳಿಗೆ ಬಿಸಿ ನೀರು ಕಷಾಯ, ಹಾಲು, ಮೊಟ್ಟೆ, ಬಾಳೆ ಹಣ್ಣನ್ನು ಉಚಿತವಾಗಿ ನೀಡುತ್ತಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….