ಹುಬ್ಬಳ್ಳಿ: ಕೋವಿಡ್ -19 ಮಹಾಮಾರಿ ಹಾವಳಿಯಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದು, ಶಾಲೆಗಳು ಆನ್ ಲೈನ್ ತರಗತಿಗೆ ಮೊರೆ ಹೋಗಿದ್ದು ವಿದ್ಯಾರ್ಥಿಗಳು ಶಾಲೆಗೆ ಬರದೆ ಇರುವುದರಿಂದ ವಿದ್ಯಾರ್ಥಿಗಳು ಶಾಲಾ ಕ್ಯಾಂಪಸ್ ನಲ್ಲಿ ಒದಗಿಸುವ ವಿವಿಧ ಸೌಲಭ್ಯ ಗಳಿಂದ ವಂಚಿತರಗಿದ್ದಾರೆ.
2020-21 ರ ಶೈಕ್ಷಣಿಕ ವರ್ಷದಲ್ಲಿ ಸಂಪೂರ್ಣ ಲಾಕ್‍ಡೌನ್ ಕಾರಣದಿಂದಾಗಿ ಶಾಲೆಗಳು ದೀರ್ಘವಾದಿವರೆಗೆ ತೆರೆಯಲು ಅನುಮತಿಸಿರಲಿಲ್ಲ. ಇದರ ಪರಿಣಾಮವಾಗಿ ಶಾಲಾ ಆಡಳಿತವು ಪೆಟ್ರೋಲ್, ಡೀಸೆಲ್, ವಿದ್ಯುತ್ ನಿರ್ವಹನಾ ವೆಚ್ಚ, ನೀರಿನ ಶುಲ್ಕಗಳು, ಲೇಖನ ಸಾಮುಗ್ರಿಗಳಂತಹ ವಿವಿಧ ವಸ್ತುಗಳ ಮೇಲಿನ ವೆಚ್ಚ ವನ್ನು ಉಳಸಿರಬೇಕು ಎಂಬ ಅಂಶಗಳನ್ನು ಪರಗಣಿಸಿದ ಸರ್ವೋಚ್ಚ ನ್ಯಾಯಾಲಯ ಸಾಂಕ್ರಾಮಿಕ ರೋಗದಿಂದಾಗಿ ಜನರು ಎದರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಸೂಕ್ಷ್ಮ ವಾಗಿರಬೇಕು ಮತ್ತು ಈ ಕಠಿಣ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಹಾಯವನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯ ಮೂರ್ತಿಗಳಾದ ಎ ಎಂ ಬಾನ್ವಿಲ್ಕರ್ ಮತ್ತು ದಿನೇಶ ಮಹೇಶ್ವರಿ ಅವರ ನ್ಯಾಯಪೀಠ ಹೇಳಿದೆ.
ವಿದ್ಯಾರ್ಥಿಗಳಿಗೆ ಒದಗಿಸದ ಸೌಲಭ್ಯಗಳಿಗೆ ಹಣ ಪಾವತಿಸಬೇಕೆಂದು ಒತ್ತಾಯಿಸುವುದರಿಂದ ಅದು ಲಾಭದಾಯಕ ವಾಗಿರುತ್ತದೆ ಅದನ್ನು ಶಾಲೆಗಳು ತಪ್ಪಿಸಬೇಕು.
2019-20 ರ ಶೈಕ್ಷಣಿಕ ವರ್ಷಕ್ಕೆ ನಿಗದಿಪಡಿಸಿದಂತೆ ವಿದ್ಯಾರ್ಥಿಗಳಿಂದ ವಾರ್ಷಿಕ ಶಾಲಾ ಶುಲ್ಕವನ್ನು ಸಂಗ್ರಹಿಸಬೇಕು, ಆದರೆ ಬಳಿಕೆಯಾಗದ ಸೌಲಭ್ಯಗಳಿಗೆ ಬದಲಾಗಿ ಆ ಮೊತ್ತದ ಮೇಲೆ ಶೇಕಡಾ 15 ರಷ್ಟು ಕಡಿತವನ್ನು ನೀಡುವಮೂಲಕ 2020-21 ರ ಶೈಕ್ಷಣಿಕ ವರ್ಷದ ಸಂಬಂಧಿತ ಅವಯಲ್ಲಿ ಶುಲ್ಕ ವಿಧಿಸಬೇಕು.
ಶುಲ್ಕ /ಬಾಕಿ ಶುಲ್ಕವನ್ನು ಪಾವತಿಸದ ಕಾರಣ ಯಾವುದೇ ವಿದ್ಯಾರ್ಥಿಗಳನ್ನು ಆನ್ ಲೈನ್ ತರಗತಿಗಳು ಅಥವಾ ದೈಹಿಕ ತರಗತಿಗಳಿಗೆ ಹಾಜರಾಗದಂತೆ ತಡೆಯುವಂತಿಲ್ಲ ಅಂತಾ ನ್ಯಾಯಾಲಯ ಶಾಲೆಗಳಿಗೆ ನಿರ್ದೇಶನ ನಿಡಿದೆ. @ಅಶೋಕ ಅಣವೇಕರ, ನ್ಯಾಯವಾದಿ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….