ಬೆಂ.ಗ್ರಾ.ಜಿಲ್ಲೆ: ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಕಲಿಕೆ ಭಾಗ್ಯ ಯೋಜನೆ (ವಿದ್ಯಾರ್ಥಿವೇತನ) ಯಡಿ ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯಲು ಮತ್ತು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ವಿದ್ಯಾರ್ಥಿವೇತನಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ಅರ್ಜಿಯನ್ನು ಆನ್ ಲೈನ್ ಮೂಲಕ ವೆಬ್‌ಸೈಟ್ http://serviceonline.gov.in/karnataka ಇಲ್ಲಿ ಸಲ್ಲಿಸಲು 2021ರ ಜುಲೈ 15 ಕೊನೆಯ ದಿನವಾಗಿದೆ.
ವಾರ್ಷಿಕ ಸಹಾಯಧನದ ವಿವರ: ನರ್ಸರಿ ತರಗತಿ ಉತ್ತೀರ್ಣರಾದ ಗಂಡು ಮಕ್ಕಳಿಗೆ ರೂ. 3,000 ಹಾಗೂ ಹೆಣ್ಣು ಮಕ್ಕಳಿಗೆ ರೂ. 4,000, 1 ರಿಂದ 4 ನೇ ತರಗತಿ ಉತ್ತೂರ್ಣಕ್ಕೆ ಗಂಡು ಮಕ್ಕಳಿಗೆ ರೂ.3,000 ಹೆಣ್ಣು ಮಕ್ಕಳಿಗೆ ರೂ. 4,000, 5 ರಿಂದ 8 ನೇ ತರಗತಿ ಉತ್ತೀರ್ಣಕ್ಕೆ ಗಂಡು ಮಕ್ಕಳಿಗೆ ರೂ. 5,000 ಹೆಣ್ಣು ಮಕ್ಕಳಿಗೆ ರೂ. 6,000, 9 ಹಾಗೂ 10 ನೇ ತರಗತಿ ಉತ್ತೀರ್ಣಕ್ಕೆ ಗಂಡು ಮಕ್ಕಳಿಗೆ ರೂ. 10,000 ಹೆಣ್ಣುಮಕ್ಕಳಿಗೆ ರೂ. 11,000, ಪ್ರಥಮ ಪಿ.ಯು.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ಗಂಡು ಮಕ್ಕಳಿಗೆ ರೂ.10,000 ಹೆಣ್ಣು ಮಕ್ಕಳಿಗೆ ರೂ. 14,000, ಐ.ಟಿ.ಐ ಉತ್ತೀರ್ಣಕ್ಕೆ ಗಂಡು ಮಕ್ಕಳಿಗೆ ರೂ. 12,000 ಹೆಣ್ಣು ಮಕ್ಕಳಿಗೆ ರೂ. 15,000, ಪದವಿ ಪ್ರತಿ ವರ್ಷಕ್ಕೆ ಗಂಡು ಮಕ್ಕಳಿಗೆ ರೂ.15,000 ಹೆಣ್ಣುಮಕ್ಕಳಿಗೆ ರೂ.20,000, ಸ್ನಾತಕೋತ್ತರ ಪದವಿ ಸೇರ್ಪಡೆಗೆ ಗಂಡು ಮಕ್ಕಳಿಗೆ ರೂ. 20,000 ಹೆಣ್ಣು ಮಕ್ಕಳಿಗೆ ರೂ. 20,000, ಪ್ರತಿ ವರ್ಷಕ್ಕೆ ಗಂಡು ಮಕ್ಕಳಿಗೆ ರೂ. 20,000 ಹೆಣ್ಣು ಮಕ್ಕಳಿಗೆ ರೂ. 25,000, ಇಂಜಿನಿಯರಿಂಗ್ ಕೋರ್ಸ್ ಬಿ.ಇ. / ಬಿ.ಟೆಕ್ ಸೇರ್ಪಡೆಗೆ ಗಂಡು ಮಕ್ಕಳಿಗೆ ರೂ. 25,000 ಹೆಣ್ಣು ಮಕ್ಕಳಿಗೆ ರೂ. 25,000, ಪ್ರತಿ ವರ್ಷಕ್ಕೆ ಗಂಡು ಮಕ್ಕಳಿಗೆ ರೂ. 25,000 ಹೆಣ್ಣು ಮಕ್ಕಳಿಗೆ ರೂ. 30,000, ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ಗಂಡು ಮಕ್ಕಳಿಗೆ ರೂ. 30,000 ಹೆಣ್ಣು ಮಕ್ಕಳಿಗೆ ರೂ. 30,000, ಪ್ರತಿ ವರ್ಷಕ್ಕೆ ಗಂಡು ಮಕ್ಕಳಿಗೆ ರೂ. 40,000 ಹೆಣ್ಣು ಮಕ್ಕಳಿಗೆ ರೂ. 50,000, ಡಿಪ್ಲೊಮಾ ಗಂಡು ಮಕ್ಕಳಿಗೆ ರೂ. 15,000 ಹೆಣ್ಣು ಮಕ್ಕಳಿಗೆ ರೂ. 20,000, ಎಂ.ಟೆಕ್/ ಎಂ.ಇ ಗಂಡು ಮಕ್ಕಳಿಗೆ ರೂ. 30,000 ಹೆಣ್ಣು ಮಕ್ಕಳಿಗೆ ರೂ. 35,000, ಎಂ.ಡಿ.(ವೈದ್ಯಕೀಯ) ಗಂಡು ಮಕ್ಕಳಿಗೆ ರೂ. 45,000 ಹೆಣ್ಣು ಮಕ್ಕಳಿಗೆ ರೂ. 55,000, ಪಿ.ಹೆಚ್.ಡಿ. (ಪ್ರತಿ ವರ್ಷಕ್ಕೆ – ಗರಿಷ್ಠ 03 ವರ್ಷ) ಗಂಡು ಮಕ್ಕಳಿಗೆ ರೂ.25,000 ಹೆಣ್ಣು ಮಕ್ಕಳಿಗೆ ರೂ. 30,000 ಗಳ ವಾರ್ಷಿಕ ಸಹಾಯಧನ ನೀಡಲಾಗುವುದು.
*ಸಲ್ಲಿಸಬೇಕಾದ ದಾಖಲೆಗಳು:* ಮಂಡಳಿಯಲ್ಲಿ ನೋಂದಣಿಯಾಗಿರುವ ಕುರಿತು ದಾಖಲೆ (ಸ್ಮಾರ್ಟ್ ಕಾರ್ಡ್ ಅಥವಾ ಗುರುತಿನ ಚೀಟಿಯ ದೃಢೀಕೃತ ಪ್ರತಿ), ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ದೃಢೀಕೃತ ಅಂಕಪಟ್ಟಿ ಮತ್ತು ವ್ಯಾಸಂಗ ಪ್ರಮಾಣ ಪತ್ರವನ್ನು ಸಲ್ಲಿಸುವುದು. *ಅರ್ಹತೆ:* ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಮಗುವಿನ ತಂದೆ ಅಥವಾ ತಾಯಿ ಅಥವಾ ಇತರೆ ನಿರ್ಮಾಣ ಕಾರ್ಮಿಕರಾಗಿದ್ದು , ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ನೋಂದಣಿಯಾಗಿರಬೇಕು. ನೋಂದಣಿ ಚಾಲ್ತಿಯಲ್ಲಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ:155214(24/7), ಕಾರ್ಮಿಕ ಅಧಿಕಾರಿಗಳು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….