ದೊಡ್ಡಬಳ್ಳಾಪುರ: ಲಾಕ್ಡೌನ್ ನಿಂದ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ, ತಾಲೂಕಿನ ಪಿ.ಎಲ್.ಹೆಚ್.ಐ.ವಿ, ಟಿ.ಬಿ. ಸೋಂಕಿತರು ಹಾಗೂ ವಿವಿಧ ವರ್ಗದ ಸುಮಾರು 600 ಜನರಿಗೆ ಆಹಾರ ಕಿಟ್ ನೀಡಲಾಯಿತು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಕೋವಿಡ್-19 ಎರಡನೇ ಅಲೆ ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ನಿಂದಾಗಿ, ಕಳೆದ ಎರಡು ತಿಂಗಳ ಸಮಸ್ಯೆಗೆ ಒಳಗಾಗಿದ್ದ ಸೋಂಕಿತ ಕುಟುಂಬಗಳಿಗೆ ಬುದ್ದ ವಿಹಾರ ಎಜುಕೇಶನ್ & ಸರ್ವೀಸೆಬಲ್ ಟ್ರಸ್ಟ್ ನೆರವಿನೊಂದಿಗೆ ಆಹಾರ ಕಿಟ್ ನೀಡಲಾಯಿತು.
ಈ ವೇಳೆ ಜಂಟಿ ನಿರ್ದೇಶಕ ಡಾ.ಮೋಹನ್ ಕುಮಾರ್, ಉಪ ನಿರ್ದೇಶಕಿ ಡಾ.ಎನ್.ಶಕೀಲಾ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಎಸ್.ನಾಗೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಪರಮೇಶ್ವರ, ಎ.ಆರ್.ಟಿ. ಅರೋಗ್ಯಾಧಿಕಾರಿ ಡಾ.ಪ್ರವೀಣ್ ಕುಮಾರ್, ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಮೇಲ್ವಿಚಾರಕಿ ಸರಿತ ಆರ್ ಹೆಗ್ಡೆ, ಡ್ಯಾಪ್ಕೂ ಕಚೇರಿಯ ರವಿಕುಮಾರ ಕೆ.ವಿ, ಬುದ್ದ ವಿಹಾರ ಎಜುಕೇಶನ್ & ಸರ್ವೀಸೆಬಲ್ ಟ್ರಸ್ಟಿನ ಮಾಳ್ವ ನಾರಾಯಣ ಸ್ವಾಮಿ, ಸಿಬ್ಬಂದಿಗಳಾದ ಸಿದ್ದರಾಜ್, ಯುವರಾಜ್, ಆನಂದ್, ರೇಣುಕಪ್ಪ, ಮಂಜುನಾಥ್, ರಾಜೇಂದ್ರ, ರಮೇಶ್, ಜಯಪ್ರಕಾಶ್, ಚಂದ್ರು ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..