1947ರಲ್ಲಿ ಅಖಂಡ ಭಾರತವು ವಿಭಜನೆಯದಾಗ ಮುಸಲ್ಮಾನರಿಗಾಗಿಯೇ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಹುಟ್ಟಿಕೊಂಡವು, ಧರ್ಮದ ಆಧಾರದ ಮೇಲೆ ಮುಸಲ್ಮಾನರಿಗೆ ಪಾಕಿಸ್ತಾನ ಎಂದು ದೇಶ ತುಂಡರಿಸಿದಾಗ ಬಹುತೇಕ ಮುಸಲ್ಮಾನರು ಪಾಕಿಸ್ತಾನಕ್ಕೆ ಹೊರಟು ಹೋದರು. ಭಾರತದಲ್ಲಿ ಅಳಿದುಳಿದ ಮುಸಲ್ಮಾನರ ತುಷ್ಠಿಕರಣಕ್ಕಾಗಿ ಭಾರತ ಹಿಂದೂ ರಾಷ್ಟ್ರ ವಾಗಿ ಘೋಷಣೆ ಆಗದೆ ಹೋಗಿದ್ದು ದುರಂತವೇ ಸರಿ.
ಸಂವಿಧಾನ ಶಿಲ್ಪಿ ಡಾ || ಬಿ ಆರ್ ಅಂಬೇಡ್ಕರ್ ರಚಸಿದ ಮೂಲ ಸಂವಿಧಾನದಲ್ಲಿ ಜಾತ್ಯಾತೀತ ಶಬ್ದವೇ ಇರಲಿಲ್ಲ, ಕಾಂಗ್ರೆಸ್ ಪಕ್ಷ ಮುಸಲ್ಮಾನರ ಓಲೈಕೆಯ ರಾಜಕೀಯದ ಪರಿಣಾಮವಾಗಿ ಬಹುಸಂಖ್ಯಾತ ಹಿಂದೂಗಳ ಭಾರತ ಜಾತ್ಯಾತೀತ ಹಣೆಪಟ್ಟೆಯೊಂದಿಗೆ ಮುಂದುವರೆದು, ಜಾತ್ಯಾತೀತ ರಾಜ್ಯ ಎನ್ನುವ ಶಬ್ದವನ್ನು ಸಂವಿಧಾನದ ನಲವತ್ತೆರಡನೆಯ ತಿದ್ದುಪಡಿ ಅದಿನಿಯಮ 1976 ರಿಂದ ಸಂವಿಧಾನದಲ್ಲಿ ಸೇರಿಸಲಾಯಿತು.
‘ಜಾತ್ಯಾತೀತ’ ಶಬ್ದವು ಭಾರತಕ್ಕೆ, ಅದರಿಂದ ಮನ್ನಣೆಯನ್ನು ಪಡೆದ, ತನ್ನದೇ ಆದ ಧರ್ಮವಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ದೇಶದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಅನುಚ್ಛೇದ 30 ರಡಿಯಲ್ಲಿ ವಿಶೇಷ ಹಕ್ಕು ಒದಗಿಸಿ ಕೊಡಲಾಗಿದೆ.
ಆದರೆ ಭಾರತಕ್ಕೆ ತನ್ನದೇ ಆದ ಮನ್ನಣೆ ಪಡೆದ ಧರ್ಮ ವಿಲ್ಲ ಎನ್ನುವದು ದುರಂತವೇ ಸರಿ. @ಅಶೋಕ ಅಣವೇಕರ, ನ್ಯಾಯವಾದಿ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..