ಧಾರವಾಡ: ತೋಟಗಾರಿಕೆ ಇಲಾಖೆ ಮೂಲಕ ಕಳೆದ 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ ಸೌಲಭ್ಯ ಪಡೆದ ಮದೀಕೊಪ್ಪ ಗ್ರಾಮದ ರೈತರಾದ ಮೌಲಾಲಿ ಮಕ್ತುಮಸಾಬ ಬೇವಿನಮರದ ಅವರು 1 ಎಕರೆ 20 ಗುಂಟೆ ಪ್ರದೇಶದಲ್ಲಿ ಕರಿಬೇವು ಬೆಳೆ ಹೊಸ ತೋಟ ನಿರ್ಮಿಸಿಕೊಂಡು ಆರು ತಿಂಗಳ ಅವಧಿಯಲ್ಲಿ 25 ರಿಂದ 30 ಕ್ವಿಂಟಾಲ್ ಕಟಾವು ಮಾಡಿ ಸುಮಾರು 85 ರಿಂದ 90 ಸಾವಿರ ರೂ.ಗಳ ಆದಾಯ ಪಡೆದಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸತೋಟ ನಿರ್ಮಿಸಿಕೊಳ್ಳಲು ಕೂಲಿ ವೆಚ್ಚವಾಗಿ ರೂ.1,07,013/-, ಹಾಗೂ ಸಾಮಗ್ರಿ ವೆಚ್ಚವಾಗಿ ರೂ.16,820/- ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ಪಡೆದು 389 ಮಾನವ ದಿನಗಳನ್ನು ಸೃಜಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ವರದಿ ನೀಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..