ದೊಡ್ಡಬಳ್ಳಾಪುರ: ಕೋವಿಡ್ -19 ಎರಡನೇ ಅಲೆ ಹಿನ್ನೆಲೆಯಲ್ಲಿ ವಾರಾಂತ್ಯದ ಕಫ್ರ್ಯೂ ಮುಂದುವರಿಸಲಾಗಿದ್ದು, ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅತ್ಯಾವಶ್ಯಕ ಮತ್ತು ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರಲಿದೆ ಎಂದು ಡಿವೈಎಸ್ಪಿ ಟಿ.ರಂಗಪ್ಪ ತಿಳಿಸಿದ್ದಾರೆ.
ವಾರಾಂತ್ಯದ ಕಫ್ರ್ಯೂ: ಕೋವಿಡ್-19ರ ಎರಡನೇ ಅಲೆ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಸರ್ಕಾರದಿಂದ ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನು ಜುಲೈ 5 ರವರೆಗೆ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲು ಸರ್ಕಾರ ಜೂನ್ 20 ರಂದು ಹೊರಡಿಸಿದ ಆದೇಶದಂತೆ ವಾರಾಂತ್ಯದಲ್ಲಿ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ದಿನಸಿ, ತರಕಾರಿ, ಹಾಲು, ಔಷಧಿ, ಮಾಂಸ, ಮೀನು, ಪಶು ಆಹಾರದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿಗಳಿಗೆ ಹಾಗೂ ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅನುಮತಿಸಲಾಗಿದೆ. ಅತ್ಯಾವಶ್ಯಕ ಹಾಗೂ ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶವಿರುತ್ತದೆ.
ಉಳಿದ ವಾರದ ದಿನಗಳಲ್ಲಿ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ ಐದು ಗಂಟೆವರೆವರೆಗೆ ನಿಗಧಿತ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆ ರಾತ್ರಿ ಕಫ್ರ್ಯೂ ಸಂಜೆ 7 ರಿಂದ ಬೆಳಿಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ.
ವಾರಾಂತ್ಯದ ಕಫ್ಯೂ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಎಲ್ಲಾ ಉತ್ಪಾದನಾ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮಥ್ರ್ಯದ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಹಾಗೂ ಗಾರ್ಮೆಂಟ್ ತಯಾರಿಕೆಯಲ್ಲಿ ತೊಡಗಿರುವ ಉತ್ಪಾದನಾ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮಥ್ರ್ಯದ ಶೇ.30 ರಷ್ಟು ಸಿಬ್ಬಂದಿಯೊಂದಿಗೆ ಕೋವಿಡ್-19 ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಹವಾನಿಂತ್ರಣ ವ್ಯವಸ್ಥೆಯನ್ನು ಚಾಲನೆಗೊಳಿಸದೇ ಎಲ್ಲ ಅಂಗಡಿಗಳಿಗೆ ಪ್ರತಿದಿನ ಬೆಳಿಗ್ಗೆ 6 ಸಂಜೆ 5 ಗಂಟೆವರೆಗೆ ಕೋವಿಡ್ ಪ್ರಮಾಣಿಕೃತ ಕಾರ್ಯವಿಧಾನ(ಎಸ್‍ಓಪಿ) ಅನುಸರಿಸಿಕೊಂಡು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಹವಾನಿಯಂತ್ರಿತ ವಾಣಿಜ್ಯ ಸಂಕೀರ್ಣ, ಮಾಲ್‍ಗಳು ಕಾರ್ಯನಿರ್ವಹಿಸಲು ಅವಕಾಶವಿರುವುದಿಲ್ಲ.
ಸಾರ್ವಜನಿಕರು ಹೊರಗಡೆ ಓಡಾಡುವುದನ್ನು ನಿಯಂತ್ರಿಸುವುದಕ್ಕಾಗಿ ಕೋವಿಡ್-19 ನಿರ್ವಹಣೆಯ ಕಾರ್ಯಾಚರಣೆಗಳನ್ನು ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಎಲ್ಲಾ ಅವಶ್ಯಕ ವಸ್ತುಗಳನ್ನು ಮನೆ ಮನೆಗೆ 24×7 ಅವಧಿಯಲ್ಲಿ ಪೂರೈಸಲು ಅನುಮತಿಸಲಾಗಿದೆ. ಹವಾನಿಯಂತ್ರಿತ ವ್ಯವಸ್ಥೆಯನ್ನು ಚಾಲನೆಗೊಳಿಸದೇ ಕೋವಿಡ್ ಪ್ರಮಾಣಿಕೃತ ಕಾರ್ಯವಿಧಾನ(ಎಸ್‍ಓಪಿ) ಅನುಸರಿಸುವ ಷರತ್ತುಗಳೊಂದಿಗೆ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್‍ಗಳಲ್ಲಿ(ಮದ್ಯಪಾನ ಹೊರತುಪಡಿಸಿ) ಕುಳಿತುಕೊಂಡು ಆಹಾರ ಸೇವಿಸಲು ಪ್ರತಿದಿನ ಬೆಳಿಗ್ಗೆ 6 ಸಂಜೆ 5 ಗಂಟವರೆಗೆ ಅನುಮತಿ ನೀಡಲಾಗಿದೆ.
ಕೋವಿಡ್ ಮಾರ್ಗಸೂಚಿ ಅನುಸರಿಸಿ ಶೇ.50 ಸಾಮಥ್ರ್ಯದೊಂದಿಗೆ ಲಾಡ್ಜ್‍ಗಳು ಮತ್ತು ರೆಸಾರ್ಟ್‍ಗಳಿಗೆ, ಚಲನಚಿತ್ರ, ಟಿವಿ ಧಾರವಾಹಿಗಳಿಗೆ ಹೊರಾಂಗಣ ಚಿತ್ರಿಕರಣಕ್ಕೆ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ ಮತ್ತು ದುರಸ್ಥಿಗೆ ಸಂಬಂಧಿಸಿದ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿಗಳು, ಸಂಸ್ಥೆಗಳಿಗೆ ಪ್ರತಿದಿನ ಬೆಳಿಗ್ಗೆ 6 ಸಂಜೆ 5 ಗಂಟೆವರೆಗೆ ಅನುಮತಿ ನೀಡಲಾಗಿದೆ.
ವಾಕಿಂಗ್ ಉದ್ದೇಶಕ್ಕಾಗಿ ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆವರೆಗೆ ಉದ್ಯಾನವನಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಯಾವುದೇ ಗುಂಪು ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ. ಶೇ.50 ರಷ್ಟು ಸಾಮಥ್ರ್ಯದೊಂದಿಗೆ ಜಿಮ್‍ಗಳಿಗೆ(ಹವಾನಿಯಂತ್ರಣ ಇಲ್ಲದೆ) ಅವಕಾಶ ನೀಡಲಾಗಿದೆ.
ಗರಿಷ್ಟ ಇಬ್ಬರು ಪ್ರಯಾಣಿಕರೊಂದಿಗೆ ಟ್ಯಾಕ್ಸಿಗಳು ಮತ್ತು ಆಟೋ ರೀಕ್ಷಾಗಳಿಗೆ ಸಂಚರಿಸಲು ಅನುಮತಿಸಿದೆ. ವೀಕ್ಷರಿಲ್ಲದೆ ಹೊರಾಂಗಣ ಕ್ರೀಡೆಗಳಿಗೆ ಅನುಮತಿ ನೀಡಲಾಗಿದೆ. ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಸಿಬ್ಬಂದಿಯ ಶೇ.50 ರಷ್ಟು ಸಾಮಥ್ರ್ಯದೊಂದಿಗೆ ಕಾರ್ಯನಿರ್ವಹಿಸಲು ಹಾಗೂ ಘನ ತ್ಯಾಜ್ಯ ವಿಲೇವಾರಿ ಸೇರಿದಂತೆ ಆರೋಗ್ಯ ವಲಯಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿಗಳಿಗೆ ಅನುಮತಿಸಿದೆ.
ನಿಂತು ಪ್ರಯಾಣಿಸುವುದನ್ನು ನಿರ್ಬಧಿಸಿ ಬಸ್ಸಗಳ ಸಂಚಾರಕ್ಕೆ ಶೇ.50 ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ ಅನುಮತಿಸಲಾಗಿದೆ.
ಈಗಾಗಲೇ ನಿಗಧಿಪಡಿಸಲಾಗಿರುವ ಮದುವೆ ಸಮಾರಂಭಗಳನ್ನು ಅವರವರ ಮನೆಗಳಲ್ಲಿಯೇ ಹತ್ತಿರದ ಸಂಬಂಧಿಕರು ಒಳಗೊಂಡಂತೆ 40 ಜನರಿಗೆ ಮೀರದಂತೆ ಅನುಮತಿಸಿದೆ ಹಾಗೂ ಅಂತ್ಯ ಸಂಸ್ಕಾರಕ್ಕೆ ಐದು ಜನರು ಮೀರದಂತೆ ನಡೆಸಲು ಅನುಮತಿಸಿದೆ.
ಈ ಆದೇಶವು ಕೋವಿಡ್-19 ಕಾರ್ಯನಿರತ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸರ್ಕಾರಿ ವಾಹನಗಳ ಓಡಾಟಕ್ಕೆ ಅನ್ವಯಿಸುವುದಿಲ್ಲ.
ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಜಿಲ್ಲೆಯಾದ್ಯಂತ ವಿನಾಯಿತಿ ಪಡೆದ ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕೂ ಅಧಿಕ ವ್ಯಕ್ತಿಗಳ ಸೇರುವಿಕೆಯನ್ನು ನಿಷೇಧಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..