ಬೆಂಗಳೂರು: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಭಾರತ ಸೋಲನ್ನು ಅನುಭವಿಸಿ ಎರಡು ದಿನವಾದರೂ, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಲೇ ಇದೆ.
ಸುಮಾರು ಎರಡು ವರ್ಷ ನಡೆದ ಡಬ್ಲ್ಯುಟಿಸಿಯ ಪಾಯಿಂಟ್ ಪಟ್ಟಿಯಲ್ಲಿ ಭಾರತ ಮೊದಲ ಮತ್ತು ನ್ಯೂಜಿಲೆಂಡ್ ಎರಡನೇ ಸ್ಥಾನ ಪಡೆದು ಪ್ರಶಸ್ತಿ ಸುತ್ತಿಗೆ ತಲುಪಿದ್ದವು.
ಫೈನಲ್ ಪಂದ್ಯದ ಮೊದಲ ಮತ್ತು ನಾಲ್ಕನೇ ದಿನದಾಟಗಳು ಮಳೆಗೆ ಆಹುತಿಯಾಗಿದ್ದವು. ಆದ್ದರಿಂದ ಪಂದ್ಯವನ್ನು ಮೀಸಲಾಗಿದ್ದ ಆರನೇ ದಿನಕ್ಕೆ ವಿಸ್ತರಿಸಲಾಗಿತ್ತು. ಭಾರತ ತಂಡದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಮತ್ತಿತರರ ಕಾರಣ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಕಿರೀಟ ಭಾರತದ ಕೈ ತಪ್ಪಿದೆ. ಆದರೆ ಈ ಸೋಲಿನ ಕುರಿತು ಖಾಸಗಿ ಸುದ್ದಿವಾಹಿಯೊಂದು ವಿಶೇಷ ವರದಿ ಮಾಡುವ ವೇಳೆ ನೀಡಿರುವ ಶೀರ್ಷಿಕೆ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಒಳಗಾಗಿದೆ.
ರಾಜ್ಯದ ಪ್ರತಿಷ್ಟಿತ ಸುದ್ದಿವಾಹಿನಿ ದಿಗ್ವಿಜಯ ನ್ಯೂಸ್ ಭಾರತದ ಸೋಲಿನ ಕುರಿತು ವಿಶೇಷ ಕಾರ್ಯಕ್ರಮದ ವೇಳೆ ಕೀಳು ಮಟ್ಟದ ಶೀರ್ಷಿಕೆ ನೀಡಿದೆ ಎಂಬುದು ಆಕ್ರೋಶಕ್ಕೆ ಒಳಗಾಗಲು ಕಾರಣ.
ಈ ಕುರಿತು ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ದೊಡ್ಡಗಣೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಈ ಕನ್ನಡ ನ್ಯೂಸ್ ಚ್ಯಾನಲ್ ಗಳಿಗೆ professional ethics ಅನ್ನೋದೇ ಇಲ್ವಾ ? ಒಂದು ಪಂದ್ಯ ಸೋತ ಮಾತ್ರಕ್ಕೆ ನಮ್ಮ ಆಟಗಾರರನ್ನು ಇಂತಹ ಕೀಳು ಮಟ್ಟದ ಶೀರ್ಷಿಕೆಯಿಂದ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ ? ಎಂದು ಟ್ವಿಟ್ ಮೂಲಕ ಪ್ರಶ್ನಿಸಿದ್ದಾರೆ.
ದೊಡ್ಡ ಗಣೇಶ್ ಆಕ್ರೋಶಕ್ಕೆ ಅನೇಕರು ಬೆಂಬಲ ಸೂಚಿಸಿದ್ದು, ಟ್ರೋಲ್ ಪೇಜ್ಗಳು ಸುದ್ದಿ ವಾಹಿನಿ ವರದಿ ಶೀರ್ಷಿಕೆ ವಿರುದ್ದ ಸಮರವನ್ನೆ ಸಾರಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..