ನವದೆಹಲಿ: ಮಹತ್ವದ ಸಾಧನೆಯಲ್ಲಿ,ಭಾರತದ ಒಟ್ಟು ಲಸಿಕಾಕರಣವು 31 ಕೋಟಿ ಮೀರಿದೆ.ತಾತ್ಕಾಲಿಕ ವರದಿಯ ಪ್ರಕಾರ ಶನಿವಾರ ಬೆಳಗ್ಗೆ 7 ಗಂಟೆಯವರೆಗೆ ಒಟ್ಟು 31,50,45,926 ಲಸಿಕೆ ಡೋಸ್ ಗಳನ್ನು 42,00,839 ಸೆಷನ್‌ಗಳ ಮೂಲಕ ನೀಡಲಾಗಿದೆ.ಕಳೆದ 24 ಗಂಟೆಗಳಲ್ಲಿ 61,19,169 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.
ಕೋವಿಡ್ 19 ಲಸಿಕಾ ಕಾರ್ಯಕ್ರಮದ ಸಾರ್ವತ್ರಿಕೀಕರಣದ ಹೊಸ ಹಂತವು ಜೂನ್ 21, 2021 ರಿಂದ ಪ್ರಾರಂಭವಾಯಿತು. ಕೇಂದ್ರ ಸರ್ಕಾರವು ಲಸಿಕೆ ನೀಡಿಕೆಯನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ವಿಸ್ತರಿಸಲು ಬದ್ಧವಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತವು 48,698 ಹೊಸ ಪ್ರಕರಣಗಳನ್ನು ವರದಿ ಮಾಡಿದೆ.ಸತತ 19 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.ಇದು ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ ಕೂಡ ನಿರಂತರವಾಗಿ ಕುಸಿತ ಕಂಡುಬರುತ್ತಿದೆ.ದೇಶದ ಸಕ್ರಿಯ ಪ್ರಕರಣಗಳ ಹೊರೆಯು ಇಂದು 5,95,565 ರಷ್ಟಿದೆ.ಸಕ್ರಿಯ ಪ್ರಕರಣಗಳ ಹೊರೆಯು 86 ದಿನಗಳ ನಂತರ 9 ಲಕ್ಷಕ್ಕಿಂತ ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 17,303ರ ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 1.97%ರಷ್ಟ ಮಾತ್ರ ಇದೆ.
ಕೋವಿಡ್-19 ಸೋಂಕಿನಿಂದ ಹೆಚ್ಚು ಜನರು ಚೇತರಿಸಿಕೊಳ್ಳುತ್ತಿರುವ ಕಾರಣ, ಭಾರತದ ದೈನಂದಿನ ಚೇತರಿಕೆಗಳ ಪ್ರಮಾಣವು ಸತತ 44ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 64,818 ಗುಣಮುಖರಾದ ಪ್ರಕರಣಗಳು ವರದಿಯಾಗಿವೆ.
ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಹದಿನಾರು ಸಾವಿರಕ್ಕಿಂತ (16,120 ) ಹೆಚ್ಚಿನ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ.
ಸಾಂಕ್ರಾಮಿಕದ ಆರಂಭದಿಂದಲೂ ಸೋಂಕಿತರಲ್ಲಿ 2,91,93,085 ಜನರು ಈಗಾಗಲೇ ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 64,818 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 96.72%, ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ಕಳೆದ 24 ಗಂಟೆಗಳಲ್ಲಿ ಒಟ್ಟು 17,35,781 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇಲ್ಲಿಯವರೆಗೆ ಭಾರತದಲ್ಲಿ 39.78 ಕೋಟಿಗಿಂತಲೂ (39,95,68,448) ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.
ದೇಶಾದ್ಯಂತ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ವಾರದ ಪ್ರಕರಣದ ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಗಮನಿಸಲಾಗಿದೆ. ವಾರದ ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 2.97% ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 2.79% ರಷ್ಟಿದೆ. ಸತತ 19 ದಿನಗಳಿಂದ ಇದು 5% ಕ್ಕಿಂತ ಕಡಿಮೆಯಿದೆ ಎಂದು ವರದಿ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..