ಇಂದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಆಚರಣೆ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡ ಅವರ 512ನೇ ಜಯಂತಿಯನ್ನು ಇಂದು ರಾಜ್ಯಾಂದ್ಯಂತ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ನಾಡಿನ ಗಣ್ಯರು ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಂಪೇಗೌಡರು ಯಲಹಂಕದಲ್ಲಿ ಕ್ರಿ.ಶ.1510 ಜೂನ್ 27ರಂದು ಕೆಂಪೇಗೌಡ ಜನಿಸಿದ್ದರು. ಇವರಿಗೆ ಹಿರಿಯ ಕೆಂಪೇಗೌಡ ಎನ್ನುವ ಹೆಸರು ಕೂಡ ಇದೆ. ಅವರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕದ ಪಾಳೇಗಾರರಾಗಿದ್ದರು. ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದ್ದರು.

ಕೆಂಪೇಗೌಡರ ತಾಯಿ ಕೆಂಪಾಂಬೆ ಮತ್ತು ಪತ್ನಿ ಚೆನ್ನಮಾಂಬೆ(ಸೋದರ ಮಾವನ ಮಗಳು) ಇಬ್ಬರೂ ಹಳೆ ಬೆಂಗಳೂರಿನವರು. ಹಾಗಾಗಿ ಇಬ್ಬರ ಪ್ರೀತಿಯ ನೆನಪಿಗಾಗಿ ತಾವು ನಿರ್ಮಿಸಿದ ಪಟ್ಟಣಕ್ಕೆ ಬೆಂಗಳೂರು ಎಂದು ಹೆಸರಿಟ್ಟಿರೆಂಬುದು ಹಲವು ವಿದ್ವಾಂಸರ ಅಭಿಪ್ರಾಯ.

ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಒಂದನೇ ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537ರಲ್ಲೇ ನಗರವನ್ನು ಕಟ್ಟಿದರು. ತದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬುದು ಕೆಂಪೇಗೌಡರ ಮಹದಾಸೆಯಾಗಿತ್ತು. ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾ ಕುಲ ಕುಸಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು.

54 ಪೇಟೆಗಳ ನಿರ್ಮಾಣ: ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಐಟಿ ಬಿಟಿ ಕಂಪನಿಗಳ ತವರೆನಿಸಿಕೊಂಡಿದೆ. ಬೆಂಗಳೂರು ಕೆಂಪೇಗೌಡರ ಕಾಲದಲ್ಲೂ ವಾಣಿಜ್ಯ ಕೇಂದ್ರವಾಗಿತ್ತು. ವೃತ್ತಿಯ ಹೆಸರಿನಲ್ಲಿ 54 ಪೇಟೆಗಳು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ, ಮಂಡಿ ಪೇಟೆ, ಬಳೇಪೇಟೆ, ಅಂಚೆಪೇಟೆ, ಹಳೇತರುಗುಪೇಟೆ, ಹೊಸತರುಗುಪೇಟೆ, ಸುಣಕಲ್‌ಪೇಟೆ, ಕುರುಬರಪೇಟೆ, ಕುಂಚಟಿಗರ ಪೇಟೆ, ಮುತ್ಯಾಲಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಹತ್ತಿಪೇಟೆ, ತಾರಾಮಂಡಲಪೇಟೆ, ದರ್ಜಿಪೇಟೆ, ಕಲಾರಪೇಟೆ, ಮೇದಾರಪೇಟೆ, ಹಳೆ ಪಟ್ನೂಲು ಪೇಟೆಗಳು ನಗರದ ಜೀವನಾಡಿಯಾಗಿದ್ದವು. ದೊಡ್ಡ ಪೇಟೆ ರಾಜಕಾರಣಕ್ಕೆ, ಚಿಕ್ಕಪೇಟೆ ವ್ಯಾಪಾರಕ್ಕೆ ಸೀಮಿತವಾಗಿತ್ತು. ಎಲ್ಲ ಜಾತಿ, ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟ ಅವರ ಸರ್ವಧರ್ಮ ಸಹಿಷ್ಣುತೆಯು ಪ್ರಜೆಗಳ ಮನಗೆದ್ದಿತ್ತು.

ಬ್ರಿಟಿಷರು ಮತ್ತು ಮೊಘಲರ ಕಾಲದಲ್ಲೂ ಹಲವು ಪೇಟೆಗಳು ನಿರ್ಮಾಣವಾದವು. ಸುಲ್ತಾನ್‌ ಪೇಟೆ, ಮಾಮೂಲ್‌ಪೇಟೆ ಮೊಘಲರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದವು. ಕಬ್ಬನ್‌ಪೇಟೆ ಬ್ರಿಟಿಷರ ಕಾಲದಲ್ಲಿ ಉದಯಿಸಿತು. ತಿಗಳರಪೇಟೆ, ಹುರಿಯೋಪೇಟೆ (ಕುರಿ ಮಾಂಸವನ್ನು ಹುರಿದು ಮಾರುತ್ತಿದ್ದ ಪೇಟೆ), ತೆಲುಗು ಪೇಟೆ, ಖತ್ತಿಪೇಟೆ, ಕೋಮಟಿ ಪೇಟೆ, ಗೌಡನ ಪೇಟೆ, ಬಸೆಟ್ಟಿ ಪೇಟೆ, ಸಂತೂಸಪೇಟೆ, ಲಿಂಗಶೆಟ್ಟಿಪೇಟೆ, ಬಲ್ಲಾಪುರದ ಪೇಟೆ, ಹುರ್ತಪೇಟೆ, ರಾಣಾಸಿಂಗ್‌ ಪೇಟೆಗಳು ನಿರ್ಮಾಣವಾದವು. ಇವುಗಳಲ್ಲಿ ಹಲವು ಪೇಟೆಗಳು ನೆಲೆ ಕಳೆದುಕೊಂಡಿದ್ದರೆ, ಕೆಲವು ಹೆಸರು ಬದಲಿಸಿಕೊಂಡಿವೆ. ಬಹುಪಾಲು ಪೇಟೆಗಳು ಹಳೆಯ ಹೆಸರನ್ನೇ ಹೊಂದಿದ್ದರೂ, ಅವುಗಳ ಚಹರೆ ಮತ್ತು ಸ್ವರೂಪವು ಸಂಪೂರ್ಣವಾಗಿ ಮಾಯವಾಗಿದೆ.

ಕೆರೆಗಳ ಕೊಡುಗೆ: ಬೆಂಗಳೂರಿಗೆ ನದಿ ಮೂಲಗಳಿರಲಿಲ್ಲ. ಹೀಗಾಗಿ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಅವರ ಕಾಲದಲ್ಲಿ 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳಿದ್ದವು ಎನ್ನಲಾಗಿದೆ. ಈ ಪೈಕಿ ಹಲವು ಕೆರೆಗಳು ಅಭಿವೃದ್ಧಿ ಹೆಸರಿನಲ್ಲಿ ಹೇಳ ಹೆಸರಿಲ್ಲದಂತಾಗಿವೆ. ಸಂಪಂಗಿ ಕೆರೆ ಜಾಗದಲ್ಲಿ ಕಂಠೀರವ ಕ್ರೀಡಾಂಗಣ, ಸಿದ್ಧಿಕಟ್ಟೆ ಇದ್ದ ಸ್ಥಳದಲ್ಲಿ ಕೆ.ಆರ್‌.ಮಾರುಕಟ್ಟೆ, ಧರ್ಮಾಂಬುಧಿ ಕೆರೆ ಜಾಗದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣ ನಿರ್ಮಾಣವಾಗಿದೆ. ನಗರೀಕರಣದ ಪರಿಣಾಮ, ಹಲವು ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ. ಬಳಕೆಗಿರಲಿ, ಮುಟ್ಟಲು ಅಂಜಬೇಕಿದೆ.

ಬೆಂಗಳೂರು ನಿರ್ಮಿಸಿದ ಕೆಂಪೇಗೌಡರು ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದರು. ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯಗಳನ್ನು ನಿರ್ಮಿಸಿ, ಅವರಿಗೆ ದೇವರ ಮೇಲಿದ್ದ ಭಕ್ತಿಯನ್ನು ತೋರ್ಪಡಿಸಿದ್ದರು.

ಕೆಂಪೇಗೌಡ ಸ್ಮರಣೆ: ಕೆಂಪೇಗೌಡರ ವಿವೇಚನಾಯುತ ಯೋಜನೆಗೆ ಮತ್ತು ಕತೃತ್ವಶಕ್ತಿಯುಳ್ಳ ವ್ಯಕ್ತಿತ್ವಕ್ಕೆ 481 ವರ್ಷಗಳ ಬಳಿಕವೂ ಜನತೆ ಋುಣಪೂರ್ವಕವಾಗಿ ನೆನೆಯುತ್ತಲೇ ಇದ್ದಾರೆ. ನಗರದ ಹೊರವಲಯದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತಿ ದೊಡ್ಡ ಬಸ್‌ ನಿಲ್ದಾಣ, ಮೆಟ್ರೊ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲಾಗಿದೆ. ಅಲ್ಲದೇ ನಗರದೆಲ್ಲೆಡೆ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಅವರ ಹೆಸರನ್ನು ಅಜರಾಮರಗೊಳಿಸಲಾಗಿದೆ.

ನಾಡಪ್ರಭು ಕೆಂಪೇಗೌಡರ ವಂಶವೃಕ್ಷ ಸದ್ಯದ ಶಾಸನಗಳ ಪ್ರಕಾರ ರಣಭೈರೇಗೌಡರಿಂದ ಆರಂಭವಾಗುತ್ತದೆ ಎನ್ನಲಾಗುತ್ತಿದೆ. ತಮಿಳುನಾಡಿನಿಂದ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮಕ್ಕೆ ವಲಸೆ ಬಂದಿದ್ದ ರಣಭೈರೇಗೌಡರಿಗೆ ಏಳು ತಮ್ಮಂದಿರು. ಮಲ್ಲಭೈರೇಗೌಡ, ಸಣ್ಣ ಭೈರೇಗೌಡ, ವೀರೇಗೌಡ, ಮರೀಗೌಡ, ಗಿಡ್ಡೇಗೌಡ, ತಮ್ಮೇಗೌಡ ಮತ್ತು ಗಿಟ್ಟಪ್ಪಗೌಡ ತಮ್ಮಂದಿರು. ಇನ್ನು ರಣಭೈರೇಗೌಡರ ಮಕ್ಕಳು ಜಯಗೌಡ, ಸಣ್ಣ ಭೈರೇಗೌಡ, ಹಾವಳಿ ಬೈರೇಗೌಡ. ಇವರೆಲ್ಲ ಬಂದಿಳಿದ ಜಾಗದಲ್ಲೇ ನೆಲೆ ನಿರ್ಮಿಸಿಕೊಂಡಿದ್ದರಿಂದ ಆವತಿ ಗ್ರಾಮ ಉದಯವಾಯಿತು. ತಮ್ಮ ಒಬ್ಬಳೇ ಮಗಳು ದೊಡ್ಡಮ್ಮಳನ್ನು ಆ ಪ್ರಾಂತ್ಯದ ಯಾಕಿಲ ದೊರೆ ಸೆಲ್ವ ನಾಯಕ ಸೊಸೆ ಮಾಡಿಕೊಳ್ಳಲು ಬಲವಂತ ಮಾಡಿದ್ದರಿಂದಲೇ ಅವರು ಅಲ್ಲಿಂದ ವಲಸೆ ಬಂದು ಆವತಿಯಲ್ಲಿ ನೆಲೆ ನಿಂತರು ಎಂದೂ ಹೇಳಲಾಗುತ್ತಿದೆ.

ಮಾಗಡಿ ಕೆಂಪೇಗೌಡ, ಯಲಹಂಕ ಕೆಂಪೇಗೌಡ, ನಾಡಪ್ರಭು ಕೆಂಪೇಗೌಡರು ಬೇರೆ ಬೇರೆಯೇ, ಎಲ್ಲರೂ ಒಬ್ಬರೇ, ಎನ್ನುವ ಪ್ರಶ್ನೆಗಳು ಈಗಲೂ ಇವೆ. ಅದಕ್ಕೆ ಉತ್ತರ ಹೀಗಿದೆ. ಯಲಹಂಕದ ಮೂಲಪುರುಷ ರಣಭೈರೇಗೌಡರ ಹಿರಿಯ ಮಗ ಜಯಗೌಡ ಎನ್ನಲಾಗುತ್ತಿದೆ. ಅವರು ಕ್ರಿ.ಶ.1420 ರಲ್ಲಿ ಅಧಿಕಾರಕ್ಕೇರಿದ್ದರು. ಸಂಸ್ಥಾನ ವಿಸ್ತರಿಸಿ 13 ವರ್ಷ ಕಾಲ ಆಡಳಿತ ನಡೆಸಿ 1433ರಲ್ಲಿ ಮೃತಪಟ್ಟಿದ್ದರು. ಅವರಿಗೆ ಇಬ್ಬರು ಮಕ್ಕಳು. ಗಿಡ್ಡೇಗೌಡ ಮತ್ತು ಮಾಚಯ್ಯಗೌಡ. ಹಿರಿಯನಾದ ಗಿಡ್ಡೇಗೌಡ, ತಂದೆಯ ನಂತರ ಗದ್ದುಗೆಗೇರಿದ್ದರು. ಮನೆದೇವರು ಕರಗದಮ್ಮನಿಗೆ (ಕೆಂಪಮ್ಮ)ಹರಕೆ ಹೊತ್ತಿದ್ದರಿಂದ ಹಲವು ವರ್ಷಗಳ ನಂತರ ಅವರಿಗೆ ಗಂಡು ಸಂತಾನ ಆಯಿತು ಎಂದು ಹೇಳಲಾಗುತ್ತಿದೆ. ಹರಕೆಯಂತೆ ಆ ಮಗುವಿಗೆ ಕೆಂಪನಂಜೇಗೌಡ ಎಂದು ನಾಮಕರಣ ಮಾಡಲಾಗಿತ್ತು. ಗಿಡ್ಡೇಗೌಡ 10 ವರ್ಷ ಕಾಲ ಆಡಳಿತ ನಡೆಸಿ 1443 ರಲ್ಲಿ ಮರಣ ಹೊಂದಿದ್ದರು. ಆ ನಂತರ ಕೆಂಪನಂಜೇಗೌಡ ಅಧಿಕಾರಕ್ಕೆ ಬಂದು ಕ್ರಿ.ಶ. 1513ರವರೆಗೆ ಸತತ 70 ವರ್ಷಗಳ ಕಾಲ ಯಲಹಂಕವನ್ನು ಆಳಿದ್ದರು. ಅವರ ಹಿರಿಯ ಪುತ್ರನೇ ‘ನಾಡಪ್ರಭು ಕೆಂಪೇಗೌಡ’

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್‌: ಆರ್‌.ಅಶೋಕ (R. Ashoka)

[ccc_my_favorite_select_button post_id="111019"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!