ದೊಡ್ಡಬಳ್ಳಾಪುರ: 16 ಸದಸ್ಯತ್ವಕ್ಕೆ ಇಳಿಕೆಯಾಗಿರುವ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿದೆ.
ರಾಜ್ಯ ಚುನಾವಣಾ ಆಯೋಗ ರಾಜ್ಯದಲ್ಲಿ ಹೊಸದಾಗಿ ಒಟ್ಟು 56 ತಾಲೂಕು ರಚನೆಯಾಗಿರುವುದರಿಂದ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ನಿಗದಿ ಪಡಿಸಿದ್ದ ಪ್ರತಿ 10,000 ಜನಸಂಖ್ಯೆಗೆ ಬದಲಾಗಿ ಪ್ರತಿ 12.500 ರಿಂದ 15,000 ಜನಸಂಖ್ಯೆಗೆ ಒಂದು ಸ್ಥಾನ ನಿಗದಿ ಪಡಿಸಿರುವ ಕಾರಣ 3,903 ತಾಪಂ ಕ್ಷೇತ್ರಗಳ ಪೈಕಿ 618 ಕ್ಷೇತ್ರಗಳು ಕಡಿಮೆಯಾಗಿ ಪ್ರಸ್ತುತ 3,285 ತಾಲೂಕು ಪಂಚಾಯಿತಿ ಕ್ಷೇತ್ರಗಳು ಮಾತ್ರ ಇರುವ ಕಾರಣ ಹೊಸಮತ ಕ್ಷೇತ್ರಗಳೆಂದು ಪರಿಗಣಿಸಿ ಮೀಸಲಾತಿಯನ್ನು ಹೊಸದಾಗಿ ಪ್ರಾರಂಬಿಸಿ ನಿಗದಿ ಪಡಿಸಲು ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಪಂ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯನ್ನು ಚುನಾವಣೆ ಆಯೋಗ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲಿ ಜುಲೈ 8ರ ಒಳಗೆ ಚುನಾವಣ ಆಯೋಗದ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ಕನಸವಾಡಿ (ಹೊನ್ನಾವರ)- ಹಿಂದುಳಿದ ವರ್ಗ ‘ಬ’.
ಕೋಡಿಹಳ್ಳಿ (ಚನ್ನದೇವಿ ಅಗ್ರಹಾರ)- ಸಾಮಾನ್ಯ (ಮಹಿಳೆ).
ಅರಳುಮಲ್ಲಿಗೆ (ತಿಪ್ಪಾಪುರ)- ಹಿಂದುಳಿದ ವರ್ಗ ‘ಅ’ ಮಹಿಳೆ.
ದರ್ಗಾಜೋಗಹಳ್ಳಿ (ಮೆಣಸಿ)- ಹಿಂದುಳಿದ ವರ್ಗ ‘ಅ’ ಮಹಿಳೆ.
ತಿಪ್ಪೂರು- ಅನುಸೂಚಿತ ಜಾತಿ (ಮಹಿಳೆ)
ಚಿಕ್ಕಹೆಜ್ಜಾಜಿ (ಹಣಬೆ)- ಸಾಮಾನ್ಯ.
ದೊಡ್ಡಬೆಳವಂಗಲ (ಹುಲಿಕುಂಟೆ)- ಸಾಮಾನ್ಯ.
ಕಾಡುತಿಪ್ಪೂರು(ಸಕ್ಕರೆಗೊಲ್ಲಹಳ್ಳಿ)- ಅನುಸೂಚಿತ ಜಾತಿ.
ಆರೂಢಿ (ಸಾಸಲು)- ಸಾಮಾನ್ಯ (ಮಹಿಳೆ).
ಗುಂಡಮಗೆರೆ- ಅನುಸೂಚಿತ ಪಂಗಡ (ಮಹಿಳೆ).
ಹಾಡೋನಹಳ್ಳಿ- ಅನುಸೂಚಿತ ಜಾತಿ (ಮಹಿಳೆ)
ತೂಬಗೆರೆ- ಸಾಮಾನ್ಯ.
ಮೇಳೆಕೋಟೆ- ಸಾಮಾನ್ಯ.
ಕೊನಘಟ್ಟ(ರಾಜಘಟ್ಟ)- ಸಾಮಾನ್ಯ.
ಕಂಟನಕುಂಟೆ- ಅನುಸೂಚಿತ ಜಾತಿ.
ಪಾಲನಜೋಗಿಹಳ್ಳಿ (ಕೊಡಿಗೇಹಳ್ಳಿ)- ಸಾಮಾನ್ಯ (ಮಹಿಳೆ).
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..