ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿಯಲ್ಲಿನ ಭೈರವ ಆಟೋಗ್ಯಾಸ್ ವತಿಯಿಂದ ನೂರಕ್ಕೂ ಹೆಚ್ಚು ಜನ ಆಟೋ ಚಾಲಕರಿಗೆ ನೀಡಲಾದ ಉಚಿತ ಸಮವಸ್ತ್ರಗಳನ್ನು ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಸರಗಳ್ಳತನ ಪ್ರಕರಣಗಳಲ್ಲಿ ಅತಿಹೆಚ್ಚು ಅಪರಾಧಿಗಳನ್ನು ಬಂಧಿಸುವಲ್ಲಿ ವೃತ್ತ ಪೊಲೀಸ್ ಇಲಾಖೆ ಮೊದಲ ಸ್ಥಾನದಲ್ಲಿದೆ. ಆದರೆ ಇಂದು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ ಸರಗಳ್ಳತನ ಪ್ರಕರಣಗಳು ನಡೆದಿದ್ದು, ತಾಲೂಕಿನ ಜನತೆ ಜಾಗ್ರತೆ ವಹಿಸಬೇಕಿದೆ. ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸಿದ್ದರು ಸಹ ಮಹಿಳೆಯರು ಒಡೆವೆ ಧರಿಸಿ ಒಂಟಿಯಾಗಿ ಓಡಾಡುವುದನ್ನ ಸ್ವಯಂ ನಿಯಂತ್ರಣ ಹೇರಿಕೊಂಡು ಕಳ್ಳರ ಕೈಗೆ ಸಿಗದಂತೆ ಜಾಗ್ರತೆ ಅಗತ್ಯವಾಗಿದೆ.
ಪೊಲೀಸ್ ಇಲಾಖೆಯಿಂದ ಜನಜಾಗೃತಿ ಕರಪತ್ರಗಳನ್ನು ಮುದ್ರಿಸಲಾಗುತ್ತಿದ್ದು, ಆಟೋ ಚಾಲಕರು ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸಬೇಕೆಂದರು.
ಇದೇ ವೇಳೆ ಭೈರವ ಆಟೋ ಗ್ಯಾಸ್ ನಲ್ಲಿ ಪ್ರತಿನಿತ್ಯ ಆಟೋಗ್ಯಾಸ್ ಹಾಕಿಸಿಕೊಂಡು ವಾಹನ ಚಾಲನೆ ಮಾಡುವವರಿಗೆ ಕೂಪನ್ ಗಳನ್ನು ನೀಡಿದ್ದು, ಲಕ್ಕಿ ಡಿಕ್ ಮೂಲಕ ವಿಜೇತರಾದವರಿಗೆ ಎಲ್ ಇಡಿ ಟಿವಿ, ಸ್ಟವ್ ಮತ್ತು ಇತರ ಬಹುಮಾನಗಳನ್ನು ನೀಡಲಾಯಿತು.
ಭೈರವ ಆಟೋ ಗ್ಯಾಸ್ ಮುಖ್ಯಸ್ಥ ಪ್ರಸಾದ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..