ದೊಡ್ಡಬಳ್ಳಾಪುರ: ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆಗೆಂದು ನೀಡಲಾಗಿರುವ ಅಟಲ್ ಜಿ ಕ್ಲಿನಿಕ್ ವೈದ್ಯರ ತಂಡ ಇಂದು ತಾಲೂಕಿನ ದಡಿಘಟ್ಟಮಡಗು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿತು.
ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಿದ ಆರೂಢಿ ಗ್ರಾಮಪಂಚಾಯಿತಿ ಸದಸ್ಯ ಶ್ರೀಧರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆರೋಗ್ಯದ ಕಾಳಜಿ ಅಗತ್ಯವಾಗಿದ್ದು, ಕರೊನಾ ಭೀತಿಯಿಂದ ಚಿಕಿತ್ಸೆಗೆ ತೆರಳದ ತಾಲೂಕಿನಿಂದ ದೂರ ಉಳಿದ ಗ್ರಾಮಗಳಿಗೆ ಅಟಲ್ ಜಿ ಕ್ಲಿನಿಕ್ ಬಂದು ಆರೋಗ್ಯ ತಪಾಸಣೆ ನಡೆಸುತ್ತಿರುವುದು ಪ್ರಶಂಸನೀಯವಾಗಿದೆ. ತಾಲೂಕಿನ ಜನರ ಆರೋಗ್ಯದ ಕಾಳಜಿ ಹೊಂದಿರುವ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಧೀರಜ್ ಮುನಿರಾಜು ಅವರ ಸಾರ್ಥಕ ಸೇವೆ ಇದಾಗಿದೆ ಎಂದರು.
ಈ ವೇಳೆ ಸುಮಾರು ನೂರಕ್ಕು ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಗ್ರಾಪಂ ಸದಸ್ಯೆ ಗೌರಮ್ಮ ನಾಗರಾಜು ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..