ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 154 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹೊಸದಾಗಿ 67 ಕರೊನಾ ಪ್ರಕರಣಗಳು ಹಾಗೂ ಇಬ್ಬರು ಸೋಂಕಿತರು ಸಾವನಪ್ಪಿರುವುದು ವರದಿಯಾಗಿದೆ. ಆದರೆ ಸಿಎಂ ಯಡಿಯೂರಪ್ಪ ಭೇಟಿಯ ಮುನ್ನಾ ದಿನವೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೆಲ ದಿನಗಳಿಂದ ಕಡಿಮೆ ಇದ್ದ ಸೋಂಕಿನ ಪ್ರಕರಣಗಳು ಸಿಎಂ ಬೇಟಿಯ ಮುನ್ನಾ ದಿನವೇ ತೀವ್ರವಾಗಲು ಇತರೆ ತಾಲೂಕಿನಲ್ಲಿರುವ ಪರೀಕ್ಷಾ ಕೇಂದ್ರಗಳು ದೊಡ್ಡಬಳ್ಳಾಪುರ ತಾಲೂಕಿನ ವರದಿ ನೀಡುವಲ್ಲಿ ಶಡ್ಯಂತ್ರ ನಡೆಸುತ್ತಿವೆ ಎಂಬ ಸಾರ್ವಜನಿಕರ ಅನುಮಾನಕ್ಕೆ ಇಂಬು ನೀಡುವಂತಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ವರದಿಯನ್ವಯ ನೆಲಮಂಗಲ ತಾಲೂಕಿನ 03 ಪುರುಷರು, 01 ಮಹಿಳೆಯರು ಸೇರಿ 04. ದೇವನಹಳ್ಳಿ ತಾಲೂಕಿನ 07 ಪುರುಷರು, 03 ಮಹಿಳೆ ಸೇರಿ 10. ದೊಡ್ಡಬಳ್ಳಾಪುರ ತಾಲೂಕಿನ 19 ಪುರುಷರು, ಮಹಿಳೆಯರು 09 ಸೇರಿ 28 ಹಾಗೂ ಹೊಸಕೋಟೆ ತಾಲೂಕಿನ 08 ಪುರುಷರು, 07 ಮಹಿಳೆಯರು ಸೇರಿ 15 ಮತ್ತು ಅನ್ಯ ಜಿಲ್ಲೆಯವರು ಸೇರಿ ಒಟ್ಟು ಜಿಲ್ಲೆಯಲ್ಲಿ 67 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೃತರ ವರದಿ: ದೇವನಹಳ್ಳಿ ತಾಲೂಕಿನ 60 ವರ್ಷದ ವೃದ್ಧ, ಹೊಸಕೋಟೆ ತಾಲೂಕಿನ 67 ವರ್ಷದ ವೃದ್ಧ ಸಾವನಪ್ಪಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 329 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 736ಕ್ಕೆ ಇಳಿಕೆಯಾಗಿದೆ. ಅಲ್ಲದೆ 5413 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಪ್ರಕಾರ 3357 ಮಂದಿಯ ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..