ದೊಡ್ಡಬಳ್ಳಾಪುರ: ತಾಲೂಕಿನ ತಿಪ್ಪೂರು ಗ್ರಾಮದ ಕೋಡಿ ಬಳಿ ಲಾರಿ ಮತ್ತು ದ್ವಿಚಕ್ರವಾಹನದ ನಡುವೆ ಮುಖಾಮುಖಿ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನಪಿದ್ದಾರೆ.
ತಿಪ್ಪೂರು ಗ್ರಾಮದ ಸೋದರರಾದ ಮುನಿರಾಜ್ ಮತ್ತು ಜಗದೀಶ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ದುರ್ಘಟನೆ ಸಂಭವಿಸಿದೆ.
ವಾಹನ ಚಲಾಯಿಸುತ್ತಿದ್ದ ಜಗದೀಶ್ (22 ವರ್ಷ) ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಸಾವನಪ್ಪಿದರೆ, ಹಿಂಬದಿ ಕುಳಿತಿದ್ದ ಆತನ
ಅಣ್ಣ ಮುನಿರಾಜ್ (24 ವರ್ಷ) ಸ್ಥಿತಿ ಗಂಭೀರವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳ ಪರಶೀಲನೆ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..