ಸಾರ್ವಜನಿಕ ಪ್ರದೇಶಗಳಲ್ಲಿ ಶುಭಕೋರುವ, ಸ್ವಾಗತ ಕೋರುವ ಮತ್ತಿತರ ಪ್ರಚಾರದ ಕುರಿತಾದ ಪ್ಲೆಕ್ಸ್ ಬ್ಯಾನರ್ ಅಳವಡಿಸಿರುವುದು ಎಲ್ಲರ ಕಣ್ಣಿಗೂ ಬಿದ್ದಿರುತ್ತೆ. ಈ ರೀತಿ ಕಟ್ಟಲು ಸ್ಥಳೀಯ ಆಡಳಿತದಿಂದ ಅನುಮತಿ ಅಗತ್ಯವಿದೆ ಎಂಬುದು ಬಹು ಜನರಿಗೆ ತಿಳಿದಿಲ್ಲ. ಅನುಮತಿ ಪಡೆಯದೆ ಕಟ್ಟಿದಲ್ಲಿ ಕಾನೂನು ಕ್ರಮಕ್ಕೂ ಒಳಗಾಗಬೇಕಾಗುತ್ತೆ.
ರಾಜಕೀಯ ಪಕ್ಷಗಳು, ಖಾಸಗಿ ವ್ಯಕ್ತಿಗಳು, ಧಾರ್ಮಿಕ ಸಂಸ್ಥೆಗಳು, ಹಾಗೂ ಇತರೆ ಸಂಘಟನೆಗಳು ಸರ್ಕಾರಿ, ಖಾಸಗಿ, ಸಾರ್ವಜನಿಕ ಆಸ್ತಿಗಳ ಮೇಲೆ, ವಿದ್ಯುತ್ ಕಂಬಗಳ ಮೇಲೆ, ರಸ್ತೆ ಬದಿ ಮರಗಳು, ಸರ್ಕಲ್ಗಳಲ್ಲಿ ರಾಜಕೀಯ ಕಾರ್ಯಕ್ರಮದ ಹಾಗೂ ಯಾವುದೇ ವಿಧವಾದ ಫ್ಲೆಕ್ಸ್, ಬ್ಯಾನರ್, ಬಾವುಟ, ಬಂಟಿಂಗ್ಸ್ ಗಳನ್ನು ಸ್ಥಳೀಯ ಪ್ರಾಧಿಕಾರದ ಅನುಮತಿ ಪಡಿಯದೆ ಅಳವಡಿಸುವುದು ಸಾರ್ವಜನಿಕರ ಆಸ್ತಿಗಳನ್ನು ವಿರೂಪಗೊಳಿಸುವುದು The Karnataka Open Places (Prevention of Disfigurement) Act-1981 ಕಲಂ.3 ರನ್ವಯ ಉಲ್ಲಂಘನೆ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.
The Karnataka Open Places (Prevention of Disfigurement) Act-1981 ಕಲಂ.1(c)ಯು ನಗರ ಪ್ರದೇಶ ಮತ್ತು ಹೆಚ್ಚು ವಿಸ್ತಾರವಾಗಿ ಬೆಳೆದ ನಗರಗಳಿಗೆ ಮಾತ್ರ ಅನ್ವಯಿಸುತ್ತಿದನ್ನು The Karnataka Open Places (Prevention of Disfigurement) Amendment Act-2020 ರ ತಿದ್ದುಪಡಿ ಮಾಡುವುದರ ಮೂಲಕ ಎಲ್ಲಾ ಪ್ರಾಧಿಕಾರಕ್ಕೂ ಅನ್ವಯವಾಗುತ್ತದೆ. ಅಂದರೆ ಬಿ.ಬಿ.ಎಂ.ಪಿ, ನಗರ ಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿಗಳಿಗೂ ಅನ್ವಯಿಸುವಂತೆ ತಿದ್ದುಪಡಿಯಾಗಿರಿರುತ್ತದೆ.
ಕಲಂ.3 ಉಲ್ಲಂಘನೆ ಮಾಡಿದವರಿಗೆ ದಂಡ ಅಥವಾ ಜೈಲುವಾಸ ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ. #ಟಿ.ಕೆ.ಹನುಮಂತರಾಜು. ವಕೀಲರು, 9916186002
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..