ದೊಡ್ಡಬಳ್ಳಾಪುರ: ಸುಮಾರು 50 ರಿಂದ 55 ವರ್ಷದ ವ್ಯಕ್ತಿಯೋರ್ವ ರೈಲಿಗೆ ಸಿಕ್ಕಿ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಮತ್ತು ರಾಜಾನುಕುಂಟೆ ರೈಲ್ವೆ ನಿಲ್ದಾಣಗಳ ನಡುವೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಸುಮಾರು 5″5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡುಮುಖ, ಕಪ್ಪು – ಬಿಳಿ ಗುಡ್ಡ ಮೀಸೆ ಬಿಟ್ಟಿರುವ ಮೃತ ವ್ಯಕ್ತಿಯು, ಕೇಸರಿ ಬಣ್ಣದ ಟಿ ಶರ್ಟ್, ನೀಲಿ ಕಪ್ಪುಬಣ್ಣದ ಟ್ರಾಕ್ ಪ್ಯಾಂಟ್ ಧರಿಸಿದ್ದು, ಎಡ ಎದೆಯಲ್ಲಿ Chinnu ಎಂಬ ಅಚ್ಚೇಯ ಗುರುತು ಇದೆ.
ಇವರ ಕುರಿತು ಮಾಹಿತಿ ಇದ್ದವರು ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಮೋಬೈಲ್: 9845014463 ಸಂಪಕಿಸಬೇಕಾಗಿ ಕೋರಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……