ನವದೆಹಲಿ: ಟೋಕಿಯೊ ಒಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಸಿಂಧೂ ಅವರು ಭಾರತದ ಹೆಮ್ಮೆ ಮತ್ತು ನಮ್ಮ ದೇಶದ ಶ್ರೇಷ್ಠ ಒಲಿಂಪಿಯನ್ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
“ಪಿ.ವಿ. ಸಿಂಧೂ @Pvsindhu1 ಅವರ ಅದ್ಭುತ ಪ್ರದರ್ಶನದಿಂದ ನಾವೆಲ್ಲರೂ ಹರ್ಷಗೊಂಡಿದ್ದೇವೆ. ಟೋಕಿಯೊ ಒಲಿಂಪಿಕ್ಸ್2020ನಲ್ಲಿ ಕಂಚು ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರು ಭಾರತದ ಹೆಮ್ಮೆ ಮತ್ತು ನಮ್ಮ ಶ್ರೇಷ್ಠ ಒಲಿಂಪಿಯನ್‌ಗಳಲ್ಲಿ ಒಬ್ಬರು #Tokyo2020,ʼʼ ಎಂದು ಹೇಳಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..