ಬೆಂಗಳೂರು: ದೇವಾಲಯ ತೆರವು ಸಂದರ್ಭದಲ್ಲಿ ಹಿಂದು ಧಾರ್ಮಿಕ ಭಾವನಗೆ ದಕ್ಕೆ ತಂದಿದ್ದಾರೆಂದು ಆರೋಪಕ್ಕೆ ಒಳಗಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಹಿಂದು ಜಾಗರಣ ವೇದಿಕೆ ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ಘಟನೆಯ ವಿವರ: ಸೋಮವಾರ ಸಂಜೆ 6-30ರ ಸಮಯದಲ್ಲಿ ನೆಲಮಂಗಲ ನಗರದ ರಾಜ್‍ಕುಮಾರ್ ವೃತ್ತದಲ್ಲಿರುವ ತಪಸ್ವಿ ವೀರಾಂಜನೇಯ ಸ್ವಾಮಿ ದೇವಸ್ಥಾನವನ್ನು ತಾಲ್ಲೂಕು ಆಡಳಿತ ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ಏಕಾಏಕಿ ದೇವಸ್ಥಾನವನ್ನು ತೆರವುಗೊಳಿಸಿದೆ.
ದೇವಸ್ಥಾನವನ್ನು ತೆರವುಗೊಳಿಸುವಾಗ ಸೂಕ್ತ ರೀತಿಯಲ್ಲಿ ತೆರವುಗೊಳಿಸಿ ಅಲ್ಲಿರುವ ವಿಗ್ರಹಗಳನ್ನು ಸೂಕ್ತ ಧಾರ್ಮಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಹ, ತಾಲ್ಲೂಕು ಆಡಳಿತ ಅದರಂತೆ ಕಾರ್ಯ ನಿರ್ವಹಿಸದೆ ಹಿಂದುಗಳ ಭಾವನೆಗೆ ಧಕ್ಕೆ ಬರುವಂತೆ ದೇವಸ್ಥಾನವನ್ನು ತೆರವುಗೊಳಿಸಿ ಮನಸ್ಸೋ ಇಚ್ಛೆ ದೇವಸ್ಥಾನವನ್ನು ಒಡೆದು ಹಾಕಿರುತ್ತಾರೆ. ಅಲ್ಲಿದ್ದ ತಪಸ್ವಿ ವೀರಾಂಜನೇಯಸ್ವಾಮಿಯ ವಿಗ್ರಹವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಕಸದ ರಾಶಿಯಲ್ಲಿ ಬಿಸಾಕಿರುವುದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎನ್ನುವುದು ಆರೋಪ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಹಿಂದು ಜಾಗರಣ ವೇದಿಕೆವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಶೀಘ್ರವೇ ಕಸದ ರಾಶಿಯಲ್ಲಿ ಹಾಕಿರುವ ಆಂಜನೇಯನ ವಿಗ್ರಹವನ್ನು ಸೂಕ್ತ ಧಾರ್ಮಿಕ ರೀತಿಯಲ್ಲಿ ಬೇರೆಡೆಗೆ ಸ್ಥಳಾಂತರಿಸಿ, ಒಡೆದು ಹಾಕಿರುವ ದೇವಸ್ಥಾನವನ್ನು ಬೇರೆಡೆ ಮರು ನಿರ್ಮಿಸಿ ಕೊಡಬೇಕು ಹಾಗೂ ಈ ರೀತಿ ದುರ್ವರ್ತನೆಯನ್ನು ತೋರಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ಬಸವರಾಜು, ಬೆಂ.ಗ್ರಾ.ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಪ್ರಚಾರ ಪ್ರಮುಖ್ ಹೇಮಂತ್ ಸೇರಿದಂತೆ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..