ದೊಡ್ಡಬಳ್ಳಾಪುರ: ನಗರದ ನಾಗರಕೆರೆ ಮೂಲಕ ಹಾದು ಹೋಗಿರುವ ಒಳಚರಂಡಿ ನೀರಿನ ಪೈಪ್ ಹೊಡೆದು ಹೋಗಿದಿದೆ. ಇದರಿಂದಾಗಿ ಕೆರೆ ಅಂಗಳದಲ್ಲಿ ನಿಂತಿದ್ದ ನೀರು ಪೈಪ್ ಮೂಲಕ ಹರಿದು ಹೋಗುತ್ತಿವೆ.
ಕೆರೆ ಅಂಗಳದ ಮೂಲಕ ಒಳಚರಂಡಿ ಹಾಕಿರುವುದೇ ಅತ್ಯಂತ ಅವೈಜ್ಞಾನಿಕ ವಿಧಾನವಾಗಿದೆ. ಈ ಹಿಂದೆಯು ಸಾಕಷ್ಟು ಬಾರಿ ಒಳಚರಂಡಿ ಪೈಪ್ಗಳು ಹೊಡೆದು ಹೋಗಿ ಕೊಳಚೆ ನೀರು ಕೆರೆ ಅಂಗಳದಲ್ಲಿ ತುಂಬಿಕೊಂಡಿತ್ತು. ಈಗ ಮಳೆಗಾಲದಲ್ಲಿ ಕೆರೆಗೆ ಬಂದಿದ್ದ ನೀರೆಲ್ಲವು ಪೈಪ್ ಮೂಲಕ ಹರಿದು ಹೋಗುತ್ತಿವೆ.
ಪೈಪ್ ಲೈನ್ ಹೊಡೆದು ಹೋಗಿರುವುದರಿಂದ ದುರ್ವಾಸನೆ ಹೊರಬರುತ್ತಿದೆ. ಇದರಿಂದಾಗಿ ಸಮೀಪದಲ್ಲಿನ ವಾಸದ ಮನೆಗಳಲ್ಲಿ ಇರುವುದೇ ಕಷ್ಟವಾಗಿದೆ. ನಗರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಗಮನಕ್ಕೆ ತಂದಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೊಮ್ಮೆ ಮಳೆ ನೀರು ಕೆರೆ ಅಂಗಳಕ್ಕೆ ಹರಿದು ಬರುವ ಮುನ್ನ ಪೈಪ್ಲೈನ್ ದುರಸ್ಥಿ ಮಾಡಬೇಕು ಎಂದು ನಾಗರಕೆರೆ ಸಮೀಪ ವಾಸ ಮಾಡುತ್ತಿರುವ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..