ನವದೆಹಲಿ: ರಾಜಕೀಯವನ್ನು ತೋಳ್ಬಲ ಮತ್ತು ಅಪರಾಧೀಕರಣದಿಂದ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್ ಎರಡು ಮಹತ್ವದ ಕ್ರಮಗಳಿಗೆ ಸೂಚನೆ ನೀಡುವ ಮೂಲಕ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿದೆ.
ಶಾಸಕರು, ಸಂಸದರ ವಿರುದ್ಧ ದಾಖಲಾಗಿ ರುವ ಪ್ರಕರಣಗಳನ್ನು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹೈಕೋರ್ಟ್ ಅನುಮತಿ ಇಲ್ಲದೆ ವಾಪಸ್ ಪಡೆಯುವಂತಿಲ್ಲ ಎಂಬುದು ಒಂದನೆಯದಾದರೆ. ಚುನಾವಣೆ ಸಂದರ್ಭ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 48 ತಾಸುಗಳ ಒಳಗಾಗಿ ಅವರ ವಿರುದ್ಧದ ಪ್ರಕರಣಗಳ ವಿವರಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಬೇಕು ಎಂದಿದೆ.
ಈ ಬಗ್ಗೆ ಕಠಿನ ಆದೇಶ ನೀಡಿರುವ ಸು.ಕೋರ್ಟ್, ಈ ನಿಯಮ ಪಾಲಿಸದ 7 ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದೆ.
ಮುಖ್ಯ ನ್ಯಾಯಾದೀಶರಾದ ಎನ್.ವಿ. ರಮಣ, ನ್ಯಾಯಾದೀಶರಾದ ವಿನೀತ್ ಶರಣ್ ಮತ್ತು ನ್ಯಾಯಾದೀಶರಾದ ಸೂರ್ಯಕಾಂತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ
ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಾಖಂಡ ಸರಕಾರಗಳು ಅಪರಾಧ ದಂಡಸಂಹಿತೆಯ 321ನೇ ವಿಧಿಯ ಅನ್ವಯ ಶಾಸಕರು, ಸಂಸದರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ಅನುಮತಿ ಕೋರಿದ್ದ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ನೀಡಿರುವ ಈ ಆದೇಶ ಮಹತ್ವ ಪಡೆದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..