ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 15 ರಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಗೋವಿಂದ ಕಾರಜೋಳ – ಬೆಳಗಾವಿ, ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ, ಬಿ.ಶ್ರೀರಾಮುಲು – ಚಿತ್ರದುರ್ಗ, ವಿ.ಸೋಮಣ್ಣ- ರಾಯಚೂರು, ಉಮೇಶ್ ಕತ್ತಿ- ಬಾಗಲಕೋಟೆ, ಎಸ್.ಅಂಗಾರ – ದಕ್ಷಿಣ ಕನ್ನಡ, ಜೆ.ಸಿ.ಮಾಧುಸ್ವಾಮಿ – ತುಮಕೂರು, ಆರಗ ಜ್ಞಾನೇಂದ್ರ- ಚಿಕ್ಕಮಗಳೂರು, ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ, ಸಿ.ಸಿ.ಪಾಟೀಲ್ – ಗದಗ, ಆನಂದ್ ಸಿಂಗ್ – ವಿಜಯನಗರ, ಕೋಟಾ ಶ್ರೀನಿವಾಸಪೂಜಾರಿ – ಕೊಡಗು, ಪ್ರಭು ಚೌಹಾಣ್ – ಬೀದರ್, ಮುರುಗೇಶ್ ನಿರಾಣಿ – ಕಲಬುರಗಿ, ಶಿವರಾಮ್ ಹೆಬ್ಟಾರ್ – ಉತ್ತರ ಕನ್ನಡ, ಎಸ್.ಟಿ.ಸೋಮಶೇಖರ್ – ಮೈಸೂರು, ಬಿ.ಸಿ.ಪಾಟೀಲ್ – ಹಾವೇರಿ, ಬಿ.ಬಸವರಾಜು – ದಾವಣಗೆರೆ, ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ, ಕೆ.ಗೋಪಾಲಯ್ಯ – ಹಾಸನ, ಶಶಿಕಲಾ ಜೊಲ್ಲೆ- ಬಿಜಾಪುರ, ಎಂ.ಟಿ.ಬಿ.ನಾಗರಾಜ್ – ಬೆಂಗಳೂರು ಗ್ರಾಮಾಂತರ, ಡಾ.ಕೆ.ಸಿ.ನಾರಾಯಣಗೌಡ – ಮಂಡ್ಯ, ಬಿ.ಸಿ.ನಾಗೇಶ್ – ಯಾದಗಿರಿ, ವಿ.ಸುನಿಲ್‌ಕುಮಾರ್ – ಉಡುಪಿ, ಆಚಾರ್ ಹಾಲಪ್ಪ ಆಚಾರ್ – ಕೊಪ್ಪಳ, ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ, ಮುನಿರತ್ನ – ಕೋಲಾರ.
ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಜಿಲ್ಲೆಗಳಿಗೆ ಸಚಿವರಿಗೆ ಹೊಣೆಗಾರಿಕೆ ನೀಡಲಾಗಿದೆ. ಕೋವಿಡ್-ಪ್ರವಾಹ ಉಸ್ತುವಾರಿ ಬೆಂಗಳೂರು ನಗರಕ್ಕೆ ಆರ್.ಅಶೋಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆಯಾದರೂ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರೇ ಧ್ವಜಾರೋಹಣ ಮಾಡಲಿದ್ದಾರೆ.
ಉಳಿದಂತೆ, ಚಾಮರಾಜನಗರ ಹಾಗೂ ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲು ಸೂಚನೆ ನೀಡಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..