ಬೆಂಗಳೂರು: ಸಕಾಲದಲ್ಲಿ ತೆರಿಗೆ ಪಾವತಿಸಿದ ವರ್ತಕರ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗುವುದು ಎಂದು ವಾಣಿಜ್ಯ ತೆರಿಗೆ ಆಯುಕ್ತರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಕರ ಸಮಧಾನ ಯೋಜನಾ-2021 ಜಾರಿಗೆ ತಂದಿದ್ದು, ಕರದಾತರು ತೆರಿಗೆ ಬಾಕಿಯನ್ನು ಸಂಪೂರ್ಣವಾಗಿ (ಶೇ.100) ಪಾವತಿಸಿದರೆ, ಜಿ.ಎಸ್.ಟಿ ಪೂರ್ವದಲ್ಲಿದ್ದ ಎಲ್ಲಾ ಕಾಯ್ದೆ ಅಡಿಯಲ್ಲಿ ಈ ಸ್ಕೀಮಿನ ಪ್ರಯೋಜನ ಪಡೆಯಲು ಕರದಾತರು ವಿವಿಧ ಕಾಯ್ದೆ ಅಡಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಲ್ಲಿ ಮತ್ತು ಅಂತಹ ವರ್ತಕರು ಸಕಾಲದಲ್ಲಿ ತೆರಿಗೆ ಪಾವತಿಸಿದ್ದಲ್ಲಿ ಅಂತಹ ವರ್ತಕರ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗುವುದು ಎಂದು ವಾಣಿಜ್ಯ ತೆರಿಗೆ ಆಯುಕ್ತರು ತಿಳಿಸಿದ್ದಾರೆ.
ಜಿ.ಎಸ್.ಟಿ. ಪೂರ್ವದಲ್ಲಿದ್ದ ಕಾಯ್ದೆಗಳಾದ ಕರ್ನಾಟಕ ಮಾರಾಟ ತೆರಿಗೆ ಕಾಯ್ದೆ-1957, ಕರ್ನಾಟಕ ಮೌಲ್ಯ ವರ್ಧಿತ ತೆರಿಗೆ ಕಾಯ್ದೆ-2003, ಕೇಂದ್ರ ಮಾರಾಟ ತೆರಿಗೆ ಕಾಯ್ದೆ-1956, ಕರ್ನಾಟಕ ವೃತ್ತಿ ತೆರಿಗೆ ಕಾಯ್ದೆ-1976, ಕರ್ನಾಟಕ ವಿಲಾಸಿ ಕಾಯ್ದೆ-1979, ಕರ್ನಾಟಕ ಕೃಷಿ ಆದಾಯ ತೆರಿಗೆ ಕಾಯ್ದೆ-1957, ಕರ್ನಾಟಕ ಮನೋರಂಜನಾ ತೆರಿಗೆ ಕಾಯ್ದೆ-1958, ಕರ್ನಾಟಕ ಪ್ರವೇಶ ತೆರಿಗೆ ಕಾಯ್ದೆ-1979 ಇದರ ಪ್ರಯೋಜನ ಪಡೆಯಲು ವಾಣಿಜ್ಯ ತೆರಿಗೆ ಇಲಾಖೆಯಿಂದ ಕರದಾತರು, ಕರ ನಿರ್ಧರಣಾ/ಮರು ಕರ ನಿರ್ಧರಣಾ/ತಿದ್ದುಪಡಿ ಆದೇಶಗಳು ಆಗಸ್ಟ್ 31 ರೊಳಗಾಗಿ ಪೂರ್ಣಗೊಳಿಸಬೇಕಾಗಿರುತ್ತದೆ.
ಈ ವಿದ್ಯುನ್ಮಾನ ಜಾಲತಾಣ http://ctax.kar.nic.in ಅಥವಾ http://gst.kar.nic.inಕ್ಕೆ ಸಂಪರ್ಕಿಸಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಅದರ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಕರದಾತರ ಸಹಿಯೊಂದಿಗೆ ಸಂಬಂಧಿಸಿದ ಕಛೇರಿಗೆ ಸಲ್ಲಿಸಲು ಕೋರಿದೆ.
ಕರದಾತರು ಇದರ ಸೌಲಭ್ಯವನ್ನು ಪಡೆಯಲು (ದಂಡ ಮತ್ತು ಬಡ್ಡಿ ಮನ್ನಾ ಮಾಡಿಕೊಳ್ಳಲು) ಸಂಪೂರ್ಣ ತೆರಿಗೆ ಬಾಕಿಯನ್ನು ಪಾವತಿಸಬೇಕಾಗುತ್ತದೆ. ತೆರಿಗೆ ಪಾವತಿಸಲು ಕೊನೆಯ ದಿನಾಂಕ 2021ರ ಡಿಸೆಂಬರ್ 31 ಆಗಿರುತ್ತದೆ ಎಂದು ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..