ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಮೊದಲ ಶನಿವಾರದ ಅಂಗವಾಗಿ ತಾಲ್ಲೂಕಿನ ಕನಸವಾಡಿಯಲ್ಲಿನ ಶನಿಮಹಾತ್ಮಸ್ವಾಮಿ ದೇವಾಲಯಕ್ಕೆ ಇಂದು ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಂಪತಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.
ಕರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಜಿಲ್ಲಾಡಳಿತ ಸೆ.7 ರವರೆಗೂ ಮುಜರಾಯಿ ಹಾಗೂ ಖಾಸಗಿ ದೇವಾಲಯಗಳನ್ನು ಸರ್ಕಾರಿ ರಜಾ ದಿನ ಹಾಗೂ ಶನಿವಾರ, ಭಾನುವಾರ ಬಂದ್ ಮಾಡುವಂತೆ ಆದೇಶ ಮಾಡಿತ್ತು. ಹೀಗಾಗಿ ಬೆಳಗಿನ ಜಾವವೇ ದೇವಾಲಯಕ್ಕೆ ದಂಪತಿಗಳ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..