ದೊಡ್ಡಬಳ್ಳಾಪುರ: ನಗರದ ರೋಜಿಪುರ ಕೋರ್ಟ್ ಮುಂಭಾಗದ ರಸ್ತೆಯಲ್ಲಿರುವ ಪಿ.ಸುಕ್ಷಿತ್ ಎಂಬುವವರಿಗೆ ಸೇರಿದ್ದ ಹೊಸ ಬೈಕ್‍ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.
ಎಸ್.ಜಿ.ಪ್ರಸಾದ್ ಅವರ ಮಗ ಪಿ. ಸುಕ್ಷಿತ್ ಇದೇ ಜೂನ್ ತಿಂಗಳಿನಲ್ಲಿ ಬಜಾಜ್ ಪ್ಲಾಟಿನಂ 110 ಹೊಸ ಬೈಕ್ ಖರೀದಿಸಿದ್ದರು. ಗುರುವಾರ ಮಧ್ಯರಾತ್ರಿ ಸುಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಮನೆಯವರು ಬೈಕ್ ಬಳಿ ಬಂದಾಗ ಬೈಕ್‍ಗೆ ಬೆಂಕಿ ಹಚ್ಚಿರುವುದು ಕಂಡು ಬಂದಿದೆ.
ಘಟನೆಯಲ್ಲಿ ಬೈಕ್‍ನ ಮೇಲ್ಬಾಗ ಪೂರ್ತಿ ಸುಟ್ಟಿದೆ. ಅದೃಷ್ಟವಷಾತ್ ಪೆಟ್ರೋಲ್ ಟ್ಯಾಂಕ್‍ಗೆ ಬೆಂಕಿ ಬೀಳದೇ ಇದ್ದುದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿದೆ.
ಬೈಕ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರು ಎಂದು ತಿಳಿದುಬಂದಿಲ್ಲ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಪಿ. ಸುಕ್ಷಿತ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……