ದೊಡ್ಡಬಳ್ಳಾಪುರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಆಚರಣೆಯನ್ನು ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾಭಕ್ತಿಗಳಿಂದ ಆಚರಿಸಿದರು.
ಈ ವರ್ಷ ಕೊವಿಡ್-19 ಹಿನ್ನಲೆಯಲ್ಲಿ ಮೆರವಣಿಗೆ ಹಾಗೂ ಜನಸಂದಣಿಗೆ ನಿಷೇಧ ಹೇರಿದ್ದ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಹಬ್ಬದ ಆಚರಣೆ ಮಾಡಲಾಯಿತು.
ನಗರದ ನಗರ್ತಪೇಟೆಯಲ್ಲಿನ ಬಾಬಯ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪ್ರಾರ್ಥನೆಗಳು ನಡೆದವು.
ಹಿಂದು ಮತ್ತು ಮುಸಲ್ಮಾನ ಬಾಂಧವರು ಸಕ್ಕರೆ ಕಡಲೇಪಪ್ಪು ನೇವೇದ್ಯ ಅರ್ಪಿಸಿ ಬಾಬಯ್ಯನಿಗೆ ಪ್ರಾರ್ಥನೆ ಸಲ್ಲಿಸಿದರು.
ನಗರದ ದರ್ಗಾ ಮಸೀದಿಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ದೊಡ್ಡಬಳ್ಳಾಪುರದ ನಗರದ ಈದ್ಗಾ ಮೊಹಲ್ಲಾ ಪಂಜೆ ಗಳಿಗೆ ವಿಶೇಷ ಅಲಂಕಾರ ಮಾಡಲಾಯಿತು ಆಂಶುಖಾನಾದಲ್ಲಿ ಮುಝವರೇ ಸರ್ದಾರ್ (ಪೂಜೆ ಸಲ್ಲಿಸುವವರು) ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು.
ನಗರದ ಚಿಕ್ಕಪೇಟೆ, ದರ್ಗಾ ಮಸೀದಿ, ಈದ್ಗಾ ಮೊಹಲ್ಲಾ ಸೇರಿದಂತೆ ಗ್ರಾಮಾಂತರ ಪ್ರದೇಶದ ದೊಡ್ಡಬೆಳವಂಗಲ,ಚಿಕ್ಕಬೆಳವಂಗಲ, ಕಾಡನೂರು,ಪುಟ್ಟಯ್ಯನ ಅಗ್ರಹಾರ ಮುಂತಾದ ಗ್ರಾಮಗಳಲ್ಲಿ ಮೊಹರಂ ಆಚರಣೆ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…