ದೊಡ್ಡಬಳ್ಳಾಪುರ: ಸೆ.3 ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ರಾಜಕೀಯ ಪಕ್ಷಗಳ ಭರಾಟೆ ತೀವ್ರಗೊಂಡಿದೆ.
ಅಂತಿಮ ದಿನವಾದ ಕಾರಣ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕನ್ನಡ ಪಕ್ಷ ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಕಗೆ ಸಜ್ಜಾಗಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ 31 ವಾರ್ಡ್ ಗಳಿಗೂ “ಬಿ” ಫಾರಂ ವಿತರಣೆ ಪೂರ್ಣಗೊಂಡಿದ್ದರೆ, ಜೆಡಿಎಸ್ ಪಕ್ಷಕ್ಕೆ ವೀರಭದ್ರನಪಾಳ್ಯ (ಕಲ್ಲುಪೇಟೆ), ಕನಕದಾಸನಗರ, ಬಸವೇಶ್ವರ ನಗರ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಎದುರಾಗಿರುವುದರಿಂದ ವರಿಷ್ಠರಿಗೆ ತಲೆ ಬಿಸಿ ತಂದೊಡ್ಡಿದೆ.
ಈ ಹಿನ್ನೆಲೆ ವರಿಷ್ಠರು ಕಾದು ನೋಡುವ ತಂತ್ರವನ್ನು ಅನುಸರಿಸಿದ್ದು, ಅಂತಿಮ ಕ್ಷಣದಲ್ಲಿ “ಬಿ” ಫಾರಂ ನೀಡುವ ಮೂಲಕ ಬಂಡಾಯಕ್ಕೆ ಅವಕಾಶ ಉಂಟಾಗದಂತೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ನಾಮ ಪತ್ರ ಸಲ್ಲಿಕೆಗೆ ಇಂದು ಅಂತಿಮ ದಿನವಾದ ಕಾರಣ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಗಿಬೀಳಲಿದ್ದು, ನಾಮಪತ್ರ ಸ್ವೀಕಾರಕ್ಕೆ ಚುನಾವಣಾಧಿಕಾರಿಗಳಿಗೆ ಒತ್ತಡವಾಗಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..