ಯಲಹಂಕ: ಅಂಗನವಾಡಿ ಬೇಟಿ ಮಾಡಲು ತೆರಳುತ್ತಿದ್ದ ಸೂಪರ್‍ವೈಸರ್‍ನ ಮೇಲೆ ಕಾರಿನಲ್ಲಿ ಬಂದು ದುಷ್ಕರ್ಮಿಗಳ ತಂಡ ಕಣ್ಣಿಗೆ ಕಾರದಪುಡಿ ಎರಚಿ, ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ದರೋಡೆ ನಡೆಸಿರುವ ಘಟನೆ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ – ಹೆಸರಘಟ್ಟ ಸೂಪರ್‍ವೈಸರ್ ನಂದಿನಿ ಅವರು ಮನೆಯಿಂದ ದಿನನಿತ್ಯದ ಕರ್ತವ್ಯಕ್ಕೆ ಯಲಹಂಕ ಮಾವಳ್ಳಿಪುರ ರಸ್ತೆಯಲ್ಲಿ ಬರುವ ಲಿಂಗರಾಜಪುರಂ ಬಳಿ ಆಕ್ಟೀವ್ ಹೊಂಡಾದಲ್ಲಿ ಅಂಗನವಾಡಿಗಳ ಬೇಟಿ ಮಾಡಲು ಎಂದಿನಂತೆ ಹಳ್ಳಿಗೆ ತೆರಳುತ್ತಿದ್ದಾಗ, ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡವು ರಸ್ತೆಯ ತುಗ್ಗು ಪ್ರದೇಶದಲ್ಲಿ ಬೈಕಿಗೆ ಅಡ್ಡಗಟ್ಟಿ ನಿಲ್ಲಿಸಿ ಕಣ್ಣಿಗೆ ಕಾರದ ಪುಡಿ ಎರಚಿದ ದುಷ್ಕರ್ಮಿಗಳ ನಾಲ್ಕು ಜನರ ತಂಡ ಆಮೇಲೆ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದಾರೆ. ನಂತರ ಕತ್ತಿನಲ್ಲಿದ್ದ ಮತ್ತೊಂದು ಸರ ಇರುವುದನ್ನು ಗಮನಿಸಿದ ದುಷ್ಟರು ಮತ್ತೆ ಹಲ್ಲೆ ನಡೆಸಿ ಮತ್ತೊಂದು ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ, ಈ ಸಂದರ್ಭದಲ್ಲಿ ಬಿಡಿಸಿಕೊಳ್ಳಲು ಹರ ಸಾಹಸ ಮಾಡಿದಾಗ ಕೆರೆಯ ಹಳ್ಳಕ್ಕೆ ನೂಕಿದ್ದಾರೆ, ಅದೇ ವೇಳೆ ರಸ್ತೆಯಲ್ಲಿ ಕಾರೊಂದು ಬಂದಾಗ ಕಾರಿನಲ್ಲಿದ್ದ ದುಷ್ಕರ್ಮಿಗಳು ಪರಾರೊಯಾಗಿದ್ದಾರೆ.
ರಾಜಾನುಕುಂಟೆ ಪೊಲೀಸರು ದೂರನ್ನು ದಾಖಲಿಸಿಕೊಂಡು, ತನಿಖೆಯನ್ನು ನಡೆಸುತ್ತಿದ್ದಾರೆ.
ರಾಜಾನುಕುಂಟೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ದರೋಡೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಶಾಲೆ, ಅಂಗನವಾಡಿ ಶಿಕ್ಷಕಿರಯರು ಹಾಗೂ ಮಹಿಳೆಯರು ರಸ್ತೆಯಲ್ಲಿ ವಾಹನಗಳು ಮತ್ತು ಹೊಸ ಗದ್ದೆಗಳಿಗೆ ಓಡಾಡಲು ಭಯಪಡುವಂತಾಗಿದೆ ಎಂಬುದು ಸಾರ್ವಜನಿಕರು ದೂರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….