ಹೈದರಾಬಾದ್: ತೆಲಂಗಾಣ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ 1996 ಬ್ಯಾಚ್‌ನ ಐಪಿಎಸ್ ಅಧಿಕಾರಿ ಕನ್ನಡಿಗರಾದ ವಿಶ್ವನಾಥ. ಸಿ. ಸಜ್ಜನರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಮುಖ್ಯಕಾರ್ಯದರ್ಶಿ ಸೋಮೇಶಕುಮಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸಜ್ಜನರ್ ಅವರ ಸೇವೆಯನ್ನು ಗುರುತಿಸಿ ಸಾರಿಗೆ ಇಲಾಖೆಯಲ್ಲಿ ಒಳ್ಳೆಯ ಸೇವೆಯನ್ನು ಮಾಡುತ್ತಾರೆ ಎಂಬ ಉದ್ದೇಶದಿಂದ ಎಂ.ಡಿ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದವರಾದ ವಿ.ಸಿ.ಸಜ್ಜನರ್ ಐಪಿಎಸ್ ಅವರು ಹುಬ್ಬಳ್ಳಿಯ ನಿವಾಸಿಗಳು. ತೆಲಂಗಾಣ ರಾಜ್ಯದ ಪೊಲೀಸ ಇಲಾಖೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ಕನ್ನಡದ ಅಧಿಕಾರಿ. ವಾರಂಗಲ್ ಹಾಗೂ ಹೈದರಾಬಾದನಲ್ಲಿ ನಡೆದ ಮಹಿಳೆಯರ ಮೇಲೆ ಆತ್ಯಾಚಾರ ಮಾಡಿದ ಕಾಮುಕರನ್ನು ಸ್ಥಳದಲ್ಲಿಯೇ ಎನಕೌಂಟರ್ ಮಾಡಿ ನ್ಯಾಯ ಒದಗಿಸಿದ ಹೆಮ್ಮೆಯ ಅಧಿಕಾರಿ ಎನ್ನಿಸಿಕೊಂಡವರು.
ಪೊಲೀಸ್ ಇಲಾಖೆಯಲ್ಲಿ ಈ ತರಹ ಅಧಿಕಾರಿಗಳು ಇದ್ದರೆ ಸಮಾಜದಲ್ಲಿ ಯಾವುದೇ ಅಪರಾಧಗಳು ಜರುಗುವುದಿಲ್ಲ ಎಂಬ ಸಂದೇಶವನ್ನು ನೀಡಿದ ಖಡಕ್ ಅಧಿಕಾರಿಗೆ ದೇಶಾದ್ಯಂತ ಜೈಕಾರ ಹಾಕಿದರು ಜನ ಸಾಮಾನ್ಯರು. ನಾಲ್ಕು ಎನ್ಕೌಂಟರ್ ಮೂಲಕ ಇಡೀ ದೇಶದಲ್ಲಿ ಸಂಚಲನ ಮೂಡಿದರು.
ಸಜ್ಜನರ್ ಅವರು ಎಎಸ್ಪಿ ಆಗಿ ಮೊದಲ ಸೇವೆ ಆರಂಭಿಸಿ ಅನೇಕ ಸ್ಥಳಗಳಲ್ಲಿ ನ್ಯಾಯಯುತ್ತವಾಗಿ ಸೇವೆ ಮಾಡಿರುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಕಡಪ, ವಾರಂಗಲ್ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಮಾಡಿ. ತೆಲಂಗಾಣ ರಾಜ್ಯ ನಿರ್ಮಾಣದ ನಂತರ ಮೊದಲ ಇಂಟಲಿಜೆನ್ಸ್ ಐಜಿಯಾಗಿ ನಾಲ್ಕು ವರ್ಷ. ಹಾಗೂ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಮೂರುವರೆ ವರ್ಷ ಸೇವೆಯನ್ನು ಮಾಡಿ ಉತ್ತಮ ಅಧಿಕಾರಿ ಎಂಬ ಸರ್ಕಾರದ ಪ್ರಶಸ್ತಿಗೆ ಪಾತ್ರರಾದ್ದರು.
ಅ.25 ರಂದು ತೆಲಂಗಾಣ ರಾಜ್ಯದ ಆರ.ಟಿ.ಸಿ. ಎಂ.ಡಿ. ಆಗಿ ನೇಮಕವಾಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..