ಶಿವಮೊಗ್ಗ: ಯುವಕನೋರ್ವ ಪ್ರೇಯಸಿಯನ್ನು ಕೊಂದು, ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಿಪ್ಪನ್ ಪೇಟೆಯ ಬೆಳ್ಳೂರು ಸಮೀಪದ ನೇರಲಗಿ ಕಾಡಿನಲ್ಲಿ ನಡೆದಿದೆ.
ಬೆಳ್ಳೂರು ಸಮೀಪದ ಕಗ್ಗಲಿಜಡ್ಡು ಗ್ರಾಮದ ಶಿವಮೂರ್ತಿ ಹಾಗೂ ಸಾಗರ ತಾಲೂಕು ಕಾನೂರು ಗ್ರಾಮದ ಕವಿತಾ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು.ಆದರೆ ಕವಿತಾ ಕಳೆದ ಕೆಲ ದಿನಗಳಿಂದ ಇನ್ನೊಬ್ಬನನ್ನು ಪ್ರೀತಿಸಲಾರಂಭಿಸಿದ್ದಳು ಆದ್ದರಿಂದ ಮನನೊಂದು ಸ್ನೇಹಿತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಶಿವಮೊಗ್ಗದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಕವಿತಾಳನ್ನು ತನ್ನೂರಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಾತನಾಡಬೇಕು ಎಂದು ಹೇಳಿ ನೇರಲಿಗೆ ಕಾಡಿಗೆ ಕರೆದೊಯ್ದು, ಅಲ್ಲಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಸ್ಥಳೀಯರು ಶಿವಮೂರ್ತಿಯನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವಮೂರ್ತಿ ಗುರುವಾರ ತಡರಾತ್ರಿ ಸಾವನ್ನಪ್ಪಿದ್ದಾನೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..