ದೊಡ್ಡಬಳ್ಳಾಪುರ: ನಗರಸಭೆಯ 31ವಾರ್ಡ್ಗಳಿಗೆ ನಡೆಯುತ್ತಿರುವ ಮತದಾನ ಮಧ್ಯಾಹ್ನ 3ಗಂಟೆ ವರದಿಯನ್ವಯ ಶೇ.52.4 ರಷ್ಟು ಮತದಾನ ಪೂರ್ಣಗೊಂಡಿದೆ.
ಜಡಿ ಮಳೆಯ ನಡುವೆಯೂ ಬಿರುಸಾಗಿ ಸಾಗಿದ್ದ ಮತದಾನ, ಸಮಯ ಕಳೆದಂತೆ ನೀರಸವಾಗಿದ್ದು, ಈಗ ಮತ್ತೆ ಬಿರುಸಾಗಿದೆ.
ಮಳೆಯ ಕಾರಣ ಮತದಾರರ ಮತಗಟ್ಟೆಗೆ ಕರೆತರು, ಕೆಲ ಅಭ್ಯರ್ಥಿಗಳು ಆಟೋ ವ್ಯವಸ್ಥೆಯನ್ನು ಮಾಡಿದ್ದು, ಉಳಿದ ನಾಲ್ಕು ಗಂಟೆ ಅವಧಿಯಲ್ಲಿ ಮತದಾನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.
ಉಳಿದಂತೆ ನಗರದ 63 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ಮಧ್ಯಾಹ್ನ 3ಗಂಟೆಯ ವರದಿಯನ್ವಯ 17534 ಗಂಡು, 17416 ಹೆಣ್ಣು ಸೇರಿ ಒಟ್ಟು 66641 ಮಂದಿ ಮತ ಚಲಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..