ದೊಡ್ಡಬಳ್ಳಾಪುರ: ನಗರಸಭೆಗೆ 6ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತ.ನ.ಪ್ರಭುದೇವ್ ದಾಖಲೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ಪುರಸಭೆ ಆಗಿದ್ದಾಗಿನಿಂದಲೂ ನಿರಂತರವಾಗಿ ಸದಸ್ಯರಾಗಿ ಆಯ್ಕೆಯಾಗುತ್ತಲೇ ಬಂದಿದ್ದಾರೆ. ನಗರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳು ಕಡಿಮೆಯಾಗಿದ್ದರು ಸಹ ಜನಪರವಾದ ಕೆಲಸಗಳ ಮೂಲಕವೇ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿ ನಿರಂತರವಾಗಿ ಆಯ್ಕೆಯಾಗುತ್ತಲೇ ಬಂದಿದ್ದಾರೆ.
ಕನ್ನಡ ಪಕ್ಷದಿಂದ ಮೂರು ಬಾರಿ ಹಾಗೂ ಜೆಡಿಎಸ್ ಪಕ್ಷದಿಂದ ಮೂರು ಬಾರಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರರು ಸೇರಿದಂತೆ ಎಲ್ಲರ ಬೆಂಬಲದಿಂದ ಒಂದು ವರ್ಷದ ಅವಧಿಗೆ ನಗರಸಭೆ ಅಧ್ಯಕ್ಷರಾಗಿಯು ಆಡಳಿತ ನಡೆಸಿದ್ದರು.
2021ರ ನಗರಸಭಾ ಚುನಾವಣೆಯಲ್ಲಿ ಒಂದಕ್ಕಿಂತಲು ಹೆಚ್ಚಿನ ಬಾರಿ ಆಯ್ಕೆದವರ ಪಟ್ಟಿಯಲ್ಲಿ ಎಂ.ಜಿ.ಶ್ರೀನಿವಾಸ್, ವಿ.ಎಸ್.ರವಿಕುಮಾರ್, ಎಚ್.ಎಸ್.ಶಿವಶಂಕರ್, ಎಂ.ಮಲ್ಲೇಶ್, ಭಾಸ್ಕರ್ ಸೇರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..