ದೊಡ್ಡಬಳ್ಳಾಪುರ: ನಗರದ ಕೋಟೆ ರಸ್ತೆಯಲ್ಲಿ ಭಗ್ನಗೊಂಡಿದ್ದ ಗಣೇಶ ವಿಗ್ರಹವನ್ನು ವಿಸರ್ಜಿಸಲಾಗಿದ್ದು, ಮಕ್ಕಳು ಮತ್ತೊಮ್ಮೆ ಗಣೇಶ ಮೂರ್ತಿಯನ್ನು ಇಡಲು ಇಷ್ಟಪಟ್ಟ ಕಾರಣ ಅವರ ಭಾವನೆಗಳನ್ನು ಗೌರವಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಹರಿತಲೇಖನಿಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಯಾರ ಅನುಮತಿಯನ್ನೂ ಪಡೆಯದೆ ಈ ರೀತಿ ವಿಘ್ನೇಶ್ವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದಾಗ, ಕೆಲವೊಮ್ಮೆ ಈ ರೀತಿ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಗಳಿರುತ್ತವೆ. ಈ ನಿಟ್ಟಿನಲ್ಲಿ ಅನುಮತಿ ಪಡೆಯದ ಆಯೋಜಕರ ಮೇಲೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆಕ್ಟ್ ಹಾಗೂ ಜಿಲ್ಲಾಧಿಕಾರಿಗಳ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣವನ್ನು ದಾಖಲಿಸಲಾಗಿದೆ.
ಮಕ್ಕಳ ಭಾವನೆಗಳಿಗೆ ಧಕ್ಕೆ ತರಬಾರದು ಎಂಬ ಕಾರಣದಿಂದ, ಈ ಬಾರಿ ಅನುಮತಿ ಪಡೆದುಕೊಳ್ಳಲು ಖುದ್ದಾಗಿ ಅಲ್ಲಿಯೇ ನಿಂತು ಅನುಮತಿ ಪತ್ರವನ್ನು ಬರೆಸಿಕೊಂಡು ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಹಳೆಯ ಗಣೇಶ ಮೂರ್ತಿಗಳನ್ನು ಇಟ್ಟಂತಹ ಸಂದರ್ಭದಲ್ಲಿ ಹಾಗೂ ಈ ಬಾರಿ ಬಹುತೇಕ ಮಣ್ಣಿನ ಮೂರ್ತಿಗಳನ್ನೇ ಇರುವಂತಹ ಕಾರಣಸಹಜವಾಗಿಯೂ ಈಗ ಈ ರೀತಿ ಆಗುವ ಸಾಧ್ಯತೆಗಳಿರುತ್ತವೆ ಎಂದು ಆಯೋಜಕರು ತಮ್ಮ ಅಭಿಪ್ರಾಯವನ್ನು ತಿಳಿಸಿರುತ್ತಾರೆ. ಆದಾಗ್ಯೂ ಕೆಲವು ಭಕ್ತರು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಪತ್ರವನ್ನು ನೀಡಿರುತ್ತಾರೆ, ಅದರಂತೆ ನಾವುಗಳು ಆ ದೃಷ್ಟಿಕೋನದಲ್ಲಿಯೂ ಸಹ ಪ್ರಸ್ತುತ ಪ್ರಕರಣದಲ್ಲಿ ತನಿಖೆ ನಡೆಸುತ್ತೇವೆ.
ಡಿವೈಎಸ್ಪಿ ರಂಗಪ್ಪ, ಸಬ್ ಇನ್ಸ್ ಪೆಕ್ಟರ್ ಗೋವಿಂದ್ ಎಲ್ಲ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು, ಸಮೀಪವಿರುವ ಸಿಸಿಟಿವಿಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ನವೀನ್ ಕುಮಾರ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..